ಕಾವೇರಿ ಪುಷ್ಕರ: ವಿಶೇಷ ಹೋಮ,ಹವನ !

Kannada News

12-09-2017 230

ಮಂಡ್ಯ: ಕಾವೇರಿ ಪುಷ್ಕರ ಹಿನ್ನೆಲೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿ ಸಾವಿರಾರು ಭಕ್ತರು ಸೇರಿದ್ದು, ನದಿಯಲ್ಲಿ ಭಕ್ತರು ಮೀಯುತ್ತಿರುವುದು ಕಂಡುಬಂದಿದೆ. ಹನ್ನೆರೆಡು ವರ್ಷಕ್ಕೊಮ್ಮೆ ನಡೆಯುವ ಕಾವೇರಿ ಪುಷ್ಕರ ಇದಾಗಿದ್ದು, ಪುಷ್ಕರದ ವೇಳೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ಪಾಪನಾಶ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ದಂಡೆಯಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಇಂದಿನಿಂದ ಸತತ ಹನ್ನೆರಡು ದಿನ ನಡೆಯಲಿರುವ ಕಾವೇರಿ ಪುಷ್ಕರ‌, ಧಾರ್ಮಿಕ ಚಿಂತಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ನಡೆಯುತ್ತಿದೆ. ಅಲ್ಲದೇ ನದಿ ದಂಡೆಯಲ್ಲಿ ಹೋಮ ಹವನವೂ ನಡೆಯುತ್ತಿದೆ. ನದಿಯಲ್ಲಿ ಮೀಯುತ್ತಿರುವ ಮತ್ತು ಮೀಯಲು ಕಾಯುತ್ತಿರುವ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಕೂಡಲಿ ಶಂಕರಾಚಾರ್ಯರು, ಅವಿಚ್ಚಿನ್ನ ಪರಂಪರೆ, ಪೂರಿ ಮತ್ತು ದ್ವಾರಕಾ ಶಿಷ್ಯರು, ಅನಂದ ಸರಸ್ವತಿ, ಗಣೇಶ ಧನಪಾಠಿಗಳು, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಗೋಪಾಲ್ ‌ಜಿ, ಗಣಪತಿ ಸಚ್ಚಿದಾನಂದ ಸ್ವಾಮಿಗಳು, ಗೋವಿಂದ ಭಟ್ ಸೇರಿದಂತೆ ಹಲವು ಪ್ರಮುಖರು ಪೂಜೆಯಲ್ಲಿ ಭಾಗಿಯಾಗಿದ್ದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ