ರಸ್ತೆ ಅಪಘಾತ: ಇಬ್ಬರ ದುರ್ಮರಣ !

Kannada News

12-09-2017

ಚಿತ್ರದುರ್ಗ: ರಸ್ತೆ ಅಪಘಾತವೊಂದರಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆಯು, ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗಿರಿಯಮ್ಮನಹಳ್ಳಿ ಬಳಿಯ, 'ರಾಷ್ಟ್ರೀಯ ಹೆದ್ದಾರಿ 150ಎ' ಬಳಿ ಅಪಘಾತ ಸಂಭವಿಸಿದೆ. ಚಳ್ಳಕೆರೆ ನಗರದಲ್ಲಿ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕಿದ್ದ ಜಗದೀಶ್ (25) ಶ್ರೀನಿವಾಸ್ (24) ಎಂದು ಮೃತರನ್ನು ಗುರುತಿಸಲಾಗಿದೆ. ಕೆಲಸ ಮುಗಿಸಿ, ರಾತ್ರಿ ಸ್ವಗ್ರಾಮ ಮನ್ನೇಕೋಟೆಗೆ ತೆರಳುವ ವೇಳೆ ದುರ್ಘಟನೆ ನಡೆದಿದೆ. ಆದರೆ ಅಪಘಾತದಲ್ಲಿ ಡಿಕ್ಕಿಹೊಡೆದ ವಾಹನವನನ್ನು ಕತ್ತಲಿನಲ್ಲಿ ಗುರುತಿಸಲಾಗದಿದ್ದು, ತಳಕು ಪೊಲೀಸ್ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವಾಹನಕ್ಕಾಗಿ ಹುಡುಕಾಟ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ