ಹುಂಡಿಯನ್ನೇ ಹೊತ್ತೊಯ್ದ ಕಳ್ಳರು !

Kannada News

12-09-2017

ಚಿತ್ರದುರ್ಗ: ಹಣಕ್ಕಾಗಿ ದೇಗುಲದ ಹುಂಡಿಯನ್ನೇ ಹೊತ್ತೊಯ್ದ ಘಟನೆಯು, ಚಿತ್ರದುರ್ಗ ಜಿಲ್ಲೆಯ ದೊಡ್ಡಬ್ಯಾಲದಕೆರೆ ಗ್ರಾಮದ ದೇಗುಲದಲ್ಲಿ ನಡೆದಿದೆ. ಗ್ರಾಮದ ಆಂಜನೇಯ ದೇಗುಲದ ಹುಂಡಿ ದೋಚಿ, ಕಳ್ಳರು ಪರಾರಿಯಾಗಿದ್ದಾರೆ. ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ದೊಡ್ಡಬ್ಯಾಲದಕೆರೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಹಣದೋಚಿ ಗ್ರಾಮದ ಹೊರ ವಲಯದಲ್ಲಿ ಹುಂಡಿ ಬಿಸಾಡಿದ್ದಾರೆ. ಹುಂಡಿಯಲ್ಲಿ ಅಪಾರ ಪ್ರಮಾಣದ ಹಣ ಇತ್ತೆಂದು ಹೇಳಲಾಗುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆ, ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲನೆ ಮಾಡಿದ್ದು, ಕಳ್ಳರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ