ಕಾಮುಕ ಪತಿ: ಮದ್ಯ ಸೇವಿಸಿ ಸೆಕ್ಸ್ ಗೆ ಒತ್ತಾಯ !

Kannada News

11-09-2017

ಬೆಂಗಳೂರು: ಆಶ್ಲೀಲ ಚಿತ್ರಗಳನ್ನು ತೋರಿಸಿ, ಮದ್ಯ ಸೇವಿಸಿ ಲೈಂಗಿಕ ಕ್ರಿಯೆಗೆ ಕರೆಯುತ್ತಿದ್ದ ಕಾಮುಕ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪತ್ನಿಯನ್ನು ಪತಿಯ ಮನೆಯವರು ಹೊರಹಾಕಿದ್ದು, ಆಕೆ ಪ್ರತಿಭಟನೆ ನಡೆಸುತ್ತಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.

ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಕೃಷ್ಣಕುಮಾರ್, ಪತ್ನಿಗೆ ಆಶ್ಲೀಲ ಚಿತ್ರಗಳನ್ನು ತೋರಿಸಿ, ಮದ್ಯ ಸೇವಿಸಿ ಲೈಂಗಿಕ ಕ್ರಿಯೆಗೆ ಕರೆಯುತ್ತಿದ್ದನು. ಕೃಷ್ಣ ಕುಮಾರ್ ಒಂದು ವರ್ಷದ ಹಿಂದೆ ಸುಜಾತ (ಹೆಸರು ಬದಲಾಯಿಸಿದೆ) ಎಂಬವರನ್ನು ಮದುವೆಯಾಗಿದ್ದನು. ಮದುವೆಯಾದ ಒಂದೇ ವರ್ಷದಲ್ಲಿ ಅತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದಾಳೆ. ಮದುವೆಯಾದ ಹೊಸತರಲ್ಲಿ ಕೃಷ್ಣ ಕುಮಾರ್ ಮತ್ತು ಸುಜಾತಾ ಹನಿಮೂನ್ ಗಾಗಿ ಮಾರಿಷಸ್ ಗೆ ಹೋಗಿದ್ದಾರೆ. ವಿದೇಶದಲ್ಲಿ ಪತ್ನಿಗೆ ಬಲವಂತವಾಗಿ ಮದ್ಯ ಕುಡಿಸಿ, ಸೆಕ್ಸ್, ಆಶ್ಲೀಲ ಚಿತ್ರಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ವಾಪಸಾದ ನಂತರವು ಪ್ರತಿದಿನ ಸೆಕ್ಸ್ ಗೆ ಪೀಡಿಸುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ವಿಡಿಯೋ ಮಾಡ್ತಿದ್ದ: ಇನ್ನೂ ಇಷ್ಟಕ್ಕೆ ಸುಮ್ಮನಾಗದ ಕೃಷ್ಣಕುಮಾರ್ ಮನೆಯಲ್ಲಿ ಪತ್ನಿಯ ನಗ್ನ ವಿಡಿಯೋ ಮಾಡುವ ಮೂಲಕ ಚಿತ್ರಹಿಂಸೆ ನೀಡಿದ್ದಾನೆ. ಕೃಷ್ಣಕುಮಾರ್ ತನ್ನ ಹಳೆಯ ಗೆಳತಿಯರ ಹೆಸರನ್ನು ಪತ್ನಿಗೆ ಇಟ್ಟು  ಮಾನಸಿಕವಾಗಿಯೂ ಹಿಂಸೆ ಕೊಟ್ಟಿದ್ದಾನೆ. ಗಂಡನ ಕಿರುಕುಳ ನೀಡುತ್ತಿದ್ದರೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧೀಕ್ಷಕಿಯಾಗಿರುವ ಅತ್ತೆ ಸ್ವರ್ಣಕಲಾ ಮಾತ್ರ ವರದಕ್ಷಿಣೆ ತರುವಂತೆ ಪೀಡಿಸಿದ್ದಾಳೆ. ಗಂಡನ ಕಿರುಕುಳ ಬಗ್ಗೆ ಅತ್ತೆಗೆ ಹೇಳಿದರೆ ಸಹಿಸಿಕೊಂಡು ಹೋಗು ಎಂದು ತಿಳಿಸಿದ್ದಾಳೆ. ಗಂಡ ಸಿಗರೇಟಿನಿಂದ ಕೈ ಸುಟ್ಟರೆ, ಅತ್ತೆ ನನ್ನ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಸುಜಾತಾ ಹೇಳಿದ್ದಾರೆ.

ಗಂಡ ಮತ್ತು ಅತ್ತೆಯ ಕಿರುಕುಳ ತಾಳಲಾರದೇ ಸುಜಾತಾ ವಿಜಯನಗರ ಪೊಲೀಸ್ ಠಾಣೆ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ದೂರು ನೀಡಿದ್ದಾಳೆ ಎಂಬ ಕೋಪದಿಂದ ತಾಯಿ ಮತ್ತು ಮಗ ಇಬ್ಬರೂ ಸೇರಿ ಸುಜಾತಾರನ್ನು ಅವರ ಸಾಮಾನುಗಳ ಸಹಿತ ಮನೆಯಿಂದ ಹೊರಹಾಕಿದ್ದಾರೆ. ಸುಜಾತಾರನ್ನು ಹೊರಹಾಕಿದ್ದ ಬಗ್ಗೆ ಆಕೆಯ ತಾಯಿ ಪ್ರಶ್ನಿಸಿದ್ದಾರೆ. ಈ ವೇಳೆ ಸ್ವರ್ಣಕಲಾ ಸುಜಾತಾರ ತಾಯಿಯ ಕೈಯನ್ನು ಕುಯ್ದು ಹಲ್ಲೆ ನಡೆಸಿದ್ದಾರೆ. ಸುಜಾತಾ ತನ್ನ ಪತಿಯ ಮನೆಯ ಮುಂದೆಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದು ನ್ಯಾಯಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ