ಭೀಕರ ಕೊಲೆ: ರುಂಡ-ಮುಂಡ ಬೇರೆ ಬೇರೆ !

Kannada News

11-09-2017

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆಯ ಬಳಿ ದುಷ್ಕರ್ಮಿಗಳು ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ, ಮುಂಡ ಬಿಟ್ಟು, ರುಂಡ ತೆಗೆದುಕೊಂಡು ಹೋಗಿ ಗುರುತು ಸಿಗದಂತೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ನೈಸ್ ರಸ್ತೆಯ ಚಿಕ್ಕ ತೋಗೂರು ಗೇಟ್‍ನ ಖಾಲಿ ಜಾಗದಲ್ಲಿ ಮೇಕೆ ಕಾಯಲು ಬೆಳಿಗ್ಗೆ 10ರ ವೇಳೆ ಹೋದವರಿಗೆ ತಲೆ ಇಲ್ಲದ ದೇಹ ಕಂಡುಬಂದಿದ್ದು, ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ನಡೆಸಿದ್ದು, ದೇಹ ಬಿದ್ದಿರುವ ಜಾಗದಲ್ಲಿ ರಕ್ತದ ಕಲೆಗಳು ಇಲ್ಲದಿರುವುದರಿಂದ ಬೇರೆಲ್ಲೋ ಯುವಕನನ್ನು ಕೊಲೆ ಮಾಡಿ ತಲೆಯನ್ನು ಕತ್ತರಿಸಿ ದೇಹವನ್ನು ಎಸೆದುಹೋಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಯುವಕನ ವಯಸ್ಸು ಸುಮಾರು 30 ರಿಂದ 40ರ ಆಸುಪಾಸಿನಲ್ಲಿದ್ದು, ತಲೆ ಇಲ್ಲದಿರುವುದರಿಂದ ಗುರುತು ಹಚ್ಚುವುದು ಕಷ್ಟವಾಗಿದೆ. ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ