ಈಜು ಬರದ ಯುವಕ: ಕೆರೆಪಾಲು !

Kannada News

11-09-2017

ಬೆಂಗಳೂರು: ಬೇಗೂರಿನ ಎಇಸಿಎಸ್ ಲೇಔಟ್‍ ನಲ್ಲಿ ಈಜಲು ಹೋದ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ನಿನ್ನೆ ನಡೆದಿದೆ. ಬೇಗೂರಿನ ಮಣಿಪಾಲ್ ಕೌಂಟ್ರಿ ರಸ್ತೆಯಲ್ಲಿ ವಾಸಿಸುತ್ತಿದ್ದ ಚೇತನ್ (21)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ಮೂಲದ ಚೇತನ್ ನಿನ್ನೆ ಸಂಜೆ 5ರ ವೇಳೆ ಎಇಸಿಎಸ್ ಲೇಔಟ್ ನ ಕೆರೆಯಲ್ಲಿ ಸ್ನೇಹಿತನೊಂದಿಗೆ ಈಜಾಡಲು ಹೋಗಿದ್ದಾರೆ. ಈಜು ಬರದೆ ಆಳಕ್ಕೆ ಹೋದ ಚೇತನ್ ಮುಳುಗಿ ಮೃತಪಟ್ಟಿದ್ದು, ರಾತ್ರಿ 8.30ರ ವೇಳೆ ಮೃತದೇಹವನ್ನು ಹೊರ ತೆಗೆಯಲಾಗಿದೆ. ಚೇತನ್ ಡಿಹೆಚ್‍ಇಎಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿರುವ ಬೇಗೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ