ಮಂಡಕಳ್ಳಿ: ವಿಮಾನ ಹಾರಾಟ ಪುನರಾರಂಭ !

Kannada News

11-09-2017

ಮೈಸೂರು: ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮತ್ತೆ ವಿಮಾನ ಹಾರಾಟ ಪುನಾರರಂಭಕ್ಕೆ ಸಕಲ ಸಿದ್ಧತೆ ನಡೆದಿದೆ.

ಸೆಪ್ಟೆಂಬರ್ 15 ರಿಂದ ವಿಮಾನಗಳ ಹಾರಾಟ ಪುನಾರಾರಂಭಕ್ಕೆ ನಿಗಧಿಯಾಗಿದ್ದ ದಿನಾಂಕದಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಕೇಂದ್ರ ವಿಮಾನಯಾನ ರಾಜ್ಯ ಖಾತೆ ಸಚಿವರ ದಿನಾಂಕ ನಿಗಧಿ ಸಮಸ್ಯೆಯಿಂದಾಗಿ ಸೆಪ್ಟೆಂಬರ್ 20ಕ್ಕೆ ಮುಂದೂಡಲಾಗಿದೆ. ಸೆಪ್ಟೆಂಬರ್ 20 ರಂದು ಕೇಂದ್ರ ವಿಮಾನಯಾನ ರಾಜ್ಯ ಖಾತೆ  ಸಚಿವ ಜಯಂತ್ ಸಿನ್ಹಾರಿಂದ ವಿಮಾನ ಹಾರಾಟ ಪುನರಾರಂಭಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿದು ಬಂದಿದೆ.

ಪ್ರತಿನಿತ್ಯ ಚೆನ್ನೈನಿಂದ-ಮೈಸೂರಿಗೆ ಹಾಗೂ ಮೈಸೂರಿನಿಂದ ಚೆನ್ನೈಗೆ ಹಾರಾಟ ನಡೆಸಲಿರುವ ಕೇಂದ್ರದ ಉಡಾನ್ ಯೋಜನೆಯ ವಿಮಾನಯಾನ ಆರಂಭವಾಗಲಿದೆ. ಟ್ರೋಜೆಟ್ ವಿಮಾನಯಾನ ಸಂಸ್ಥೆಯ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮೈಸೂರು ವಿಮಾನ ನಿಲ್ದಾಣದ ಸಲಹಾ ಸಮಿತಿ, ಒಂದು ವರ್ಷದ ಒಪ್ಪಂದಕ್ಕೆ ಸಹಿಹಾದೆ. ಒಟ್ಟು 78 ಆಸನಗಳ ವ್ಯವ್ಯಸ್ಥೆ ಹೊಂದಿರುವ ಉಡಾನ್ ಯೋಜನೆಯ ವಿಮಾನ ಪ್ರತಿನಿತ್ಯ ಹಾರಾಟ ನಡೆಸಲಿದೆ ಎಂದು ತಿಳಿದು ಬಂದಿದೆ.

ಚೆನ್ನೈನಿಂದ ಪ್ರತಿನಿತ್ಯ ಸಂಜೆ 6.40ಕ್ಕೆ ಮೈಸೂರಿಗೆ ಬರಲಿರುವ ವಿಮಾನ, ಮತ್ತೆ  ಸಂಜೆ 7.05ಕ್ಕೆ ಚೆನ್ನೈಗೆ ಹೊರಡಲಿದೆ. ಪರಿಣಾಮ ಈ ಬಾರಿಯ ದಸರಾದ ಮಹೋತ್ಸವಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ