ನಾಯಿಮರಿಗಳನ್ನು ರಕ್ಷಿಸಿದ ಪಾಲಿಕೆ ಸದಸ್ಯ !

Kannada News

11-09-2017

ಮೈಸೂರು: ತಾಯಿಯ ಮಡಿಲಲ್ಲಿ ಇರಬೇಕಾದ ನಾಯಿ ಮರಿಗಳನ್ನು ಬೇರ್ಪಡಿಸಿ, ಸುರಿಯುತ್ತಿದ್ದ ಮಳೆಯ ನಡುವೆ ಪಾರ್ಕ್ ನಲ್ಲಿರಿಸಿ ತೆರಳಿರುವ ಘಟನೆಯು ಮೈಸೂರಿನಲ್ಲಿ ನಡೆದಿದೆ. ಮಳೆಯ ನಡುವೆಯೇ ನಿರ್ದಯಿಗಳು ರಟ್ಟಿನ ಡಬ್ಬಿಯಲ್ಲಿ ನಾಯಿ ಮರಿಗಳನ್ನಿಟ್ಟಿದ್ದು, ಈ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ, ನಗರ ಪಾಲಿಕೆ ಸದಸ್ಯ ಸುನಿಲ್ ಅವರು ಪರಿತಪಿಸುತ್ತಿದ್ದ ನಾಯಿ ಮರಿಗಳನ್ನು ಕಂಡು ಮರುಗಿ, ಅವುಗಳನ್ನು ರಕ್ಷಿಸಿದ್ದಾರೆ. ಮೈಸೂರಿನ ಚಾಮುಂಡಿಪುರಂನಲ್ಲಿರುವ ಪಾರ್ಕ್ ನಲ್ಲಿ ನಿರ್ದಯಿಗಳು ನಾಯಿಮರಿಗಳನ್ನಿರಿಸಿ ಹೋಗಿದ್ದರು. ಒಟ್ಟು ಏಳು ನಾಯಿ ಮರಿಗಳನ್ನು ರಕ್ಷಿಸಿ, ಪಶುವೈದ್ಯ ಸುರೇಶ್ ಅವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ