ಸಮುದ್ರಕ್ಕೆ ಬಿದ್ದು: ಮೀನುಗಾರ ಸಾವು !

Kannada News

11-09-2017

ಉಡುಪಿ: ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಸಾವನ್ನಪ್ಪಿರುವ ದುರ್ಘಟನೆಯು, ಕುಂದಾಪುರ ತಾಲ್ಲೂಕಿನ ಕೋಡಿ ಲೈಟ್ ಹೌಸ್ ಬಳಿ ನಡೆದಿದೆ. ಚಂದ್ರ ಪೂಜಾರಿ (46) ಮೃತ ಮೀನುಗಾರ. ಸಹೋದರನೊಂದಿಗೆ ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಹೃದಯಾಘಾತ ಸಂಭವಿಸಿ ನೀರಿಗೆ ಬಿದ್ದ ಚಂದ್ರ ಪೂಜಾರಿ ಮೃತಪಟ್ಟಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಉಡುಪಿ ಹೃದಯಾಘಾತ ಮೀನುಗಾರ ಸಾವು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ