ರೈಲಿನಿಂದ ಟಿಸಿಯನ್ನು ನೂಕಿದ ಕಳ್ಳ !

Kannada News

11-09-2017

ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಿಂದ ಟಿಕೇಟ್ ಟಿಸಿ ಯನ್ನು ಹೊರದಬ್ಬಿದ ಕಳ್ಳ, ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ. ರಾಯಬಾಗ-ಘಟಪ್ರಭಾ ರೈಲು ಮಾರ್ಗದಲ್ಲಿ, ನಿಜಾಮುದ್ದೀನ್-ವಾಸ್ಕೋಡಗಾಮಾ ಎಕ್ಸ್ ಪ್ರೆಸ್ ರೈಲಿನಲ್ಲಿ  ಘಟನೆ ನಡೆದಿದೆ. ಚಿನ್ನಪ್ಪ ಕೆ.ಎಂ ರೈಲಿನಿಂದ ಹೊರಗೆ ಬಿದ್ದ ಟಿಸಿ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಚಿನ್ನಪ್ಪ ಕೆ.ಎಂ ಪ್ರಾಣಾಪಾಯದಿಂದ ಪಾರಾಗಿದ್ದು, ಹುಬ್ಬಳ್ಳಿ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಮುಂಜಾನೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಿಜಾಮುದ್ದೀನ್ -ವಾಸ್ಕೊಡಿಗಾಮಾ ರೈಲಿನ  ಸ್ಲೀಪರ್‌ ಕೋಚ್ ನಲ್ಲಿ ಅನುಮಾನಾಸ್ಪದಾಗಿ ಓಡಾಡುತ್ತಿರುವ ಯುವಕನ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕೋಚ್ 11ರಲ್ಲಿ ದಿಲ್ಲಿಯಿಂದ ಬರುತ್ತಿದ್ದ ವ್ಯಕ್ತಿಯೊಬ್ಬನ 18 ಸಾವಿರ ರೂ, ಮೌಲ್ಯದ ಮೊಬೈಲ್ ಕಳ್ಳತನವಾಗಿರುವುದು ಸುಳಿವು ಸಿಕ್ಕಿತು. ಈ ಕುರಿತು ಅನುಮಾನಾಸ್ಪದವಾಗಿ ಒಡಾಡುತ್ತಿದ್ದ, ಯುವಕನನ್ನು ತಡೆದು ವಿಚಾರಿಸಿದಾಗ ಮೊಬೈಲ್ ಕದ್ದದ್ದು ಗೊತ್ತಾಗಿ. ಆತನನ್ನು ಸರೆ ಹಿಡಿದ ಟಿಸಿ, ಘಟಪ್ರಭಾ ರೈಲ್ವೆ ಪೊಲೀಸರಿಗೆ ಒಪ್ಪಿಸಲು ತಮ್ಮ ಬಳಿ ಇರಿಸಿಕೊಂಡಿದ್ದರು. ಈ ವೇಳೆ ಕಳ್ಳನು ಶೌಚಾಲಯಕ್ಕೆ ಹೋಗುವುದಾಗಿ ತೆರಳಿ 10 ನಿಮಿಷವಾದರೂ ಬಾರದ ಹಿನ್ನೆಲೆಯಲ್ಲಿ ನೋಡಲು ಹೋದ ಟಿಸಿ ಯನ್ನು ಏಕಾಎಕಿಯಾಗಿ ಕೆಳಗೆ ತಳ್ಳಿದ್ದಾನೆ. 65-75 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದ ತಕ್ಷಣ, ಇನ್ನೊಬ್ಬ ಟಿಟಿಐಗೆ ಫೋನ್ ಮೂಲಕ ವಿಷಯ ಮುಟ್ಟಿಸಿದ್ದಾರೆ. ನಂತರ ಪ್ರಯಾಣಿಕರು ಚೈನ್ ಎಳೆದು, ರೈಲು ನಿಲ್ಲಿಸಿ ಗಾಯಗೊಂಡು ನರಳಾಡುತ್ತಿದ್ದ ರೈಲ್ವೆ ಅಧಿಕಾರಿಯನ್ನು ಸಾರ್ವಜನಿಕರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ