ಪರ್ಸ್ ಕದ್ದು: ಎಟಿಎಂ ನಿಂದ ಹಣ ಗುಳುಂ !

Kannada News

11-09-2017

ಬೆಂಗಳೂರು:ಖತರ್ನಾಕ್ ಕಳ್ಳಿಯೊಬ್ಬಳು ಬಸ್‍ನಲ್ಲಿ ಗರ್ಭಿಣಿಯೊಬ್ಬರ ಗಮನ ಬೇರೆಡೆ ಸೆಳೆದು ಪರ್ಸ್ ಕದ್ದು ಬ್ಯಾಗ್‍ನಲ್ಲಿದ್ದ ಡೆಬಿಟ್ ಕಾರ್ಡ್ ಬಳಸಿ ಹಣ ದೋಚಿ ಕೈಚಳಕ ತೋರಿಸಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಬುಧವಾರ(ಸೆ.6)ರಂದು ಕೆ.ಆರ್. ಪುರಂ ಬಳಿ ಸಂಚರಿಸುತ್ತಿದ್ದ ಬಸ್‍ ನಲ್ಲಿ ಪರ್ಸ್ ಕದ್ದ ಕಳ್ಳಿ ಎಟಿಎಂನಲ್ಲಿ 40 ಸಾವಿರ ಹಣ ದೋಚಿದ್ದಾಳೆ. ಲಕ್ಷ್ಮೀ ಪ್ರಿಯಾ ಎಂಬುವರಿಗೆ ಸೇರಿದ ಹಣಕ್ಕೆ ಖತರ್ನಾಕ್ ಕಳ್ಳಿ ಕತ್ತರಿ ಹಾಕಿದ್ದಾಳೆ. 6ರ ಸಂಜೆ ವೇಳೆಗೆ ಲಕ್ಷ್ಮಿ ಪ್ರಿಯಾ ಬಸ್‍ ನಲ್ಲಿ ಭಟ್ಟರಹಳ್ಳಿಯಿಂದ ಕೆ.ಆರ್.ಪುರಂಗೆ ತೆರಳುತಿದ್ದರು.

ಈ ವೇಳೆ ಅಪರಿಚಿತ ಮಹಿಳೆಯೊಬ್ಬಳು ಪರಿಚಯ ಮಾಡಿಕೊಂಡಿದ್ದಾಳೆ. ಹಾಗೇ ಮಾತನಾಡುತ್ತಾ ಲಕ್ಷ್ಮಿ ಅವರ ಗಮನ ಬೇರೆಡೆ ಸೆಳೆದು ಬ್ಯಾಗ್‍ ನಲ್ಲಿದ್ದ ಪರ್ಸ್ ಲಪಟಾಯಿಸಿದ್ದಾಳೆ. ಕಳವು ಮಾಡಿ ಮುಂದಿನ ನಿಲ್ದಾಣದಲ್ಲಿಳಿದ ಚಾಲಾಕಿ ಕಳ್ಳಿ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದಾಳೆ. ಪರ್ಸ್‍ ನಲ್ಲೇ ಎಟಿಎಂ ಕಾರ್ಡ್ ಪಾಸ್ ವರ್ಡ್ ಬರೆದಿದ್ದ ಚೀಟಿಯೂ ಕಳ್ಳಿಗೆ ಸಿಕ್ಕಿದೆ.

ಕೂಡಲೇ ಆಕೆ ಕೆ.ಆರ್.ಪುರಂನ ಭಟ್ಟರಹಳ್ಳಿ ಎಸ್‍ಬಿಐ ಎಟಿಎಂನಿಂದ 40 ಸಾವಿರ ರೂ. ಡ್ರಾ ಮಾಡಿದ್ದಾಳೆ. ಸಿಸಿಟಿವಿಯಲ್ಲಿ ಕಳ್ಳಿ ಹಣವನ್ನು ಡ್ರಾ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಬಗ್ಗೆ ಹಣ ಕಳೆದುಕೊಂಡ ಲಕ್ಷ್ಮೀ ಕೆ.ಆರ್. ಪುರಂ ಪೊಲೀಸರಿಗೆ ದೂರು ನೀಡಿದ್ದಾಳೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಕಳ್ಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ