ಪ್ರಧಾನಿ ಭಾಷಣ ವೀಕ್ಷಣೆ ಕಡ್ಡಾಯ !

Kannada News

11-09-2017 334

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ವೀಕ್ಷಿಸಲು ಮೈಸೂರಿನ, ಮಾನಸಗಂಗೋತ್ರಿ ಆವರಣದ ಸೆನೆಟ್‌ ಭವನದಲ್ಲಿ ಸಿದ್ಧತೆ ನಡೆಸಿದ್ದಾರೆ. ದೀನ್ ದಯಾಳ್‌ ಉಪಾಧ್ಯಾಯ ಅವರ 100ನೇ ವರ್ಷಾಚರಣೆ ಹಾಗೂ, ಸ್ವಾಮಿ ವಿವೇಕಾನಂದ ಶಿಕಾಗೊ ವಿಶ್ವಧರ್ಮ ಸಂಸತ್ತಿನಲ್ಲಿ ಭಾಷಣದ 125ನೇ ವರ್ಷದ ಸ್ಮರಣಾರ್ಥ ಹಿನ್ನೆಲೆ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಭಾಷಣವನ್ನು ವೀಕ್ಷಿಸುವುದು ಕಡ್ಡಾಯ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸೂಚನೆ ನೀಡಿತ್ತು.

ಈ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಸುತ್ತೋಲೆ ಹೊರಡಿಸಿವೆ. ಮೈಸೂರು ವಿ.ವಿ.ಯೂ ಸುತ್ತೋಲೆಯನ್ನು ಹೊರಡಿಸಿದೆ. ವಿ.ವಿ ವ್ಯಾಪ್ತಿಯ ಎಲ್ಲ ಅಧ್ಯಯನ ವಿಭಾಗಗಳ ನಿರ್ದೇಶಕರು, ಅಧ್ಯಕ್ಷರು, ಕಾಲೇಜುಗಳ ಪ್ರಾಂಶುಪಾಲರಿಗೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಕರೆತರುವಂತೆ ನಿರ್ದೇಶನ ನೀಡಲಾಗಿದೆ. ಪ್ರಧಾನಿ ಮೋದಿ ಭಾಷಣ ವೀಕ್ಷಣೆಗೆ ಪರದೆ ವ್ಯವಸ್ಥೆ ಮಾಡಲಾಗಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಕೂರಲು ಸ್ಥಳಾವಕಾಶ ಮಾಡಿಕೊಡಲಾಗಿದೆ. ವಿ.ವಿ ಅಧೀನದ ಪದವಿ ಕಾಲೇಜುಗಳು ಮಾತ್ರ ಅಲ್ಲದೇ, ನಗರದ ಇತರ ಕಾಲೇಜುಗಳ ವಿದ್ಯಾರ್ಥಿಗಳಿಗೂ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ