ವ್ಯಕ್ತಿ ಆತ್ಮಹತ್ಯೆ: 4 ದಿನಗಳ ನಂತರ ಬೆಳಕಿಗೆ !

Kannada News

09-09-2017

ಕೋಲಾರ: ಕೌಟುಂಬಿಕ ಕಲಹ ಹಿನ್ನಲೆ ವ್ಯಕ್ತಿ ನೇಣಿಗೆ ಶರಣಾಗಿದ್ದಾರೆ. ಕೋಲಾರದ, ಮಾಲೂರು ತಾಲ್ಲೂಕಿನ ಶೆಟ್ಟಿನಗರ ಬಡಾವಣೆಯಲ್ಲಿ ಘಟನೆ ನಡೆದಿದೆ. ನಾಗರಾಜ್ (28) ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ನಾಲ್ಕು ದಿನದಿಂದ ಮನೆ ಬಾಗಿಲು ಮುಚ್ಚಿದ ಹಿನ್ನಲೆ, ಪಕ್ಕದ ಮನೆಯವರಿಂದ ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ನಾಗರಾಜ್ ಕಳೆದ ಒಂದು ವರ್ಷದ ಹಿಂದೆ ಪತ್ನಿಯಿಂದ ದೂರ ಉಳಿದಿರುವುದಾಗಿ ತಿಳಿದುಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ, ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ