ಕೈ ಕೊಯ್ದುಕೊಂಡು ಪ್ರತಿಭಟನೆ !

Kannada News

09-09-2017

ಹುಬ್ಬಳ್ಳಿ: ಬ್ಯಾಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರಿಗೆ ಪ್ರತ್ಯಕೇ ಮೀಸಲಾತಿ ನೀಡುವಂತೆ ಪಟ್ಟು ಹಿಡಿದು, ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.  ಹುಬ್ಬಳ್ಳಿಯ ಐ.ಬಿ.ಎಮ್.ಆರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳಿಂದ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬೆಳಿಗ್ಗೆ 8.30 ಆರಂಭ ಆಗಬೇಕಿದ್ದ ಬ್ಯಾಂಕಿಂಗ್ ಪರೀಕ್ಷೆ  (ಐಬಿಪಿಎಸ್ )ಯನ್ನು ಸಾವಿರಾರು ಅಭ್ಯರ್ಥಿಗಳು ಬಹಿಷ್ಕರಿಸಿದ್ದಾರೆ. ಪ್ರತಿಭಟನೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿದ್ಯಾ ನಗರ ಠಾಣೆಯ ಪೊಲೀಸರ ದೌಡಾಯುಸಿದ್ದಾರೆ.

ಇನ್ನು ಈ ವೇಳೆ ಕೈ ಕೊಯ್ದುಕೊಂಡ ಐಬಿಪಿಎಸ್ ಪರೀಕ್ಷೆ ವಿಧ್ಯಾರ್ಥಿ ಕನ್ನಡಿಗರಿಗೆ ಪ್ರತ್ಯಕೇ ಮೀಸಲಾತಿ ನೀಡುವಂತೆ ಆಗ್ರಹಿಸಿದ್ದಾರೆ. ಈತ ಕರ್ನಾಟಕದ ವಿಧ್ಯಾರ್ಥಿ ಸಲೀಂ ಎಂದು ತಿಳಿದು ಬಂದಿದೆ. ಹೊರ ರಾಜ್ಯದ ವಿಧ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು, ಪ್ರತಿಭಟನಾ ನಿರತರು ಆರೋಪಿಸಿದರು. ಪ್ರತಿಭಟನಾ ಸ್ಥಳಕ್ಕೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್ ಆಗಮಿಸಿದ್ದು, ಪ್ರತಿಭಟನಾನಿರತ ಕನ್ನಡ ಅಭ್ಯರ್ಥಿಗಳ ಮನವೊಲಿಸಲು ಯತ್ನಿಸಿದರು. ಅಲ್ಲದೇ ಪರೀಕ್ಷೆಗೆ ಅಡ್ಡಿಪಡಿಸಿದರೆ ಬಂಧಿಸುವ ಎಚ್ಚರಿಕೆ ನೀಡಿದರು. ಸ್ಥಳದಲ್ಲಿ ಐದು ಪೊಲೀಸ್ ವ್ಯಾನ್‌ಗಳ ಭದ್ರತೆಗಾಗಿ ಕಾದಿರಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ