ಬೆಂಕಿ ತಗುಲಿ ಯುವತಿ ದುರ್ಮರಣ !

Kannada News

09-09-2017

ಮೈಸೂರು: ಟೀ ಮಾಡುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಬೆಂಕಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಟೆರೆಷಿಯನ್ ಕಾಲೇಜಿನ ಬಿಬಿಎಂ ವಿಧ್ಯಾರ್ಥಿನಿ ರಕ್ಷಿತಾ (18) ಮೃತ ದುರ್ದೈವಿ. ಮೈಸೂರಿನ ಯರಗನಹಳ್ಳಿಯ ಕೃಷ್ಣ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸೆಪ್ಟೆಂಬರ್ 5 ರಂದು ಘಟನೆ ನಡೆದಿತ್ತು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಕ್ಷಿತಾ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ