ಅಪ್ರಾಪ್ತ ಬಾಲಕಿ ಮದುವೆ: ಬಾಲಕಿ ರಕ್ಷಣೆ !

Kannada News

09-09-2017

ಮೈಸೂರು: ಅಪ್ರಾಪ್ತ ಬಾಲಕಿಯ ಮದುವೆಯನ್ನು ಮಕ್ಕಳ ಸಹಾಯವಾಣಿ ಅಧಿಕಾರಿಗಳು ತಡೆದಿದ್ದಾರೆ. ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, 16 ವರ್ಷದ ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಕೊರೆದೊಯ್ದಿದ್ದಾರೆ. ಸಹಾರ ಫಂಕ್ಷನ್ ಹಾಲ್ ನಲ್ಲಿ ನಡೆಯಬೇಕಿದ್ದ ಮದುವೆಯು,  ಅಪರಿಚಿತ ವ್ಯಕ್ತಿಯ ಕರೆಯ ಮೂಲಕ ಅಧಿಕಾರಿಗಳು ಮತ್ತು ಎನ್.ಆರ್.ಠಾಣೆ ಪೊಲೀಸರ ಸಹಕಾರದಿಂದ  ಮದುವೆಯಾಗಬೇಕಿದ್ದ  ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ಅಪ್ರಾಪ್ತ ಬಾಲಕಿ ಮದುವೆಯನ್ನು ತಡೆದಿದ್ದಾರೆ. ಅಲ್ಲಾಭಕ್ಷ್ ಎಂಬಾತನ ಜೊತೆ ವಿವಾಹ ಮಾಡಲು ಸಿದ್ದತೆ ನಡೆಸಿದ್ದರು, ಆದರೆ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿ. 2 ಕುಟುಂಬಕ್ಕೂ ನೋಟಿಸ್ ಜಾರಿ ಮಾಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

ಮೈಸೂರು ಬಾಲಕಿ ತಡೆದ ಅಧಿಕಾರಿಗಳು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ