ಮಳೆ ಅವಾಂತರ: ಬಿಬಿಎಂಪಿಗೆ ಹಿಡಿಶಾಪ !

Kannada News

09-09-2017

ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ನಗರದ ಬಹುತೇಕ ಕಡೆ ಬುಡ ಸಹಿತ ಮರಗಳು ಧರೆಗುರುಳಿವೆ. ಸಜ್ಜನ್ ರಾವ್ ಸರ್ಕಲ್, ವಿವಿ.ಪುರಂ, ಆರ್.ವಿ ರೋಡ್ ಲಾಲ್ ಬಾಗ್ ಸೇರಿದಂತೆ ಬಹುತೇಕ ಕಡೆ ಬೃಹತ್ ಮರಗಳು ಉರುಳಿಬಿದ್ದಿವೆ. ಇನ್ನು ಕೆಲವು ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿರುವುದು, ಇದರಿಂದ ನಗರದ ಹಲವುಕಡೆ ರಾತ್ರಿಯೆಲ್ಲ ವಿದ್ಯುತ್ ಇಲ್ಲದೆ ಪರದಾಡುವಂತಾಯಿತು, ಮರ ಧರೆಗುರುಳಿದ ಹಿನ್ನಲ್ಲೆಯಿಂದ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಿ, ವಾಹನ ಸವಾರರು ರಸ್ತೆಯಲ್ಲಿ ಸಂಚಾರಿಸಲು ಹರಸಾಹಸ ಪಟ್ಟಿದ್ದಾರೆ. ನಗರದ ಕೆಲವು ಕಡೆ ಮರಗಳು ಮನೆ,ಗೋಡೆ ಮೇಲೆ ಬಿದ್ದಿದ್ದು, ಗೋಡೆಗಳು ಕುಸಿದು ಬಿದ್ದಿವೆ.                       

ಇನ್ನು ಬೆಳಿಗ್ಗೆಯಿಂದಲೇ ಬಿಬಿಎಂಪಿ ಸಿಬ್ಬಂದಿ, ಬಿದ್ದಿರುವ ಮರಗಳ ತೆರವು ಕಾರ್ಯಚರಣೆ ಮಾಡಿದ್ದಾರೆ. ಕೋರಮಂಗಲ ಸೇರಿದಂತೆ ಹಲವು ಕಡೆಗೆ ಮನೆಗೆ ನುಗ್ಗಿದ ಚರಂಡಿ ನೀರಿನಿಂದ, ರಾತ್ರಿಯಿಡೀ ಜನರು ಪರದಾಡಬೇಕಾಯಿತು. ಇದರಿಂದ ಬಿಬಿಎಂಪಿಗೆ ಹಿಡಿಶಾಪ ಹಾಕಿದ್ದಾರೆ. ನಿನ್ನೆ ಮಳೆಯ ಪರಿಣಾಮ ಸುಮಾರು 50 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 30 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ