ಖರ್ಗೆ ಆಪ್ತರಿಗೆ ಐಟಿ ಶಾಕ್ !

Kannada News

09-09-2017

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ, ಇಲಿಯಾಸ್ ಬಾಗವಾನ್ ಮನೆ ಮೇಲೆ ಐಟಿ ದಾಳಿ ಸುದ್ದಿ ಬಿಸಿಯಾಗಿರುವಾಗಲೇ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಪ್ತ, ಉದ್ಯಮಿ ಖಲೀಲ್ ಸೇಠ್ ಸೇರಿ ಐವರು ಉದ್ಯಮಿಗಳ ಮನೆ ಮತ್ತು ಕಚೇರಿಗಳಿಗೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಖಲೀಲ್ ಸೇಠ್ ಅವರ ಮನೆ ಹಾಗೂ ಐವಾನ್-ಇ -ಶಾಹಿ ಪ್ರದೇಶದ ವಿಜಯ ವಿದ್ಯಾಲಯ ರಸ್ತೆ ಯಲ್ಲಿರುವ ಕಚೇರಿ ಮೇಲೆ ಬೆಳಗ್ಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ಹುಸೇನಿ ಗಾರ್ಡನ್ ನಲ್ಲಿ ಇನ್ನೊಬ್ಬ ಆಪ್ತ ಮುಜೀಬ್ ಎಂಬುವರ ಮನೆ ಮೇಲೂ ದಾಳಿ ನಡೆಸಿದ್ದು, ವಿಚಾರಣೆ ನಡೆಸಲು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಅಲ್ಲದೆ, ಈ ವೇಳೆ ಅವರ ಜತೆ ಕೆಲವು ಬ್ಯಾಂಕ್ ಗಳಿಗೂ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆನ್ನಲಾಗಿದೆ. ಜೊತೆಗೆ ಉದ್ಯಮಿಗಳಾದ ಶಹಾ ಅವರ ವಿವೇಕಾನಂದ ನಗರದ ಮನೆ, ಮುಖ್ಯ ರಸ್ತೆಯಲ್ಲಿರುವ ಕಚೇರಿ, ಕೊಠಾರಿ ಹಾಗೂ ಅಯೂಬ್ ಎಂಬುವರ ಕಚೇರಿ, ಕೋರ್ಟ್ ಬಳಿಯ ಮನೆಯಲ್ಲಿ ಶೋಧ ನಡೆಸಿದ್ದಾರೆ. ಕಲಬುರಗಿ ನಗರದ 11 ಕಡೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ