ಎಚ್ಚರ: ಬ್ಲೂವೇಲ್ ಬೆನ್ನತ್ತಿದ ಮೈಸೂರು !

Kannada News

09-09-2017

ಮೈಸೂರು: ಡೆಡ್ಲಿ ಗೇಮ್ ಬ್ಲೂವೇಲ್ ಗೆ ರಾಜ್ಯದ ಮೈಸೂರಿನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಆತಂಕಕಾರಿ ಮಾಹಿತಿ ಹೊರಬೀಳುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ, ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಇರುವ ಒಟ್ಟು 3,387 ಶಾಲೆಗಳಲ್ಲಿ ಅಪಾಯಕಾರಿ ಬ್ಲೂವೇಲ್ ಗೇಮ್ ಬಗ್ಗೆ ಜಾಗೃತಿ ಮೂಡಿಸುವಂತೆ ಸುತ್ತೋಲೆ ಹೊರಡಿಸಿದೆ. ಈ ಕುರಿತು ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಿ.ಕೆ.ಎಸ್ ವರ್ಧನ್ ರಿಂದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸುತ್ತೋಲೆ ರವಾನಿಸಿದ್ದಾರೆ. ಸುತ್ತೋಲೆ ಹೊರಡಿಸುವ ಮೂಲಕ ಬ್ಲೂವೇಲ್ ಗೇಮ್ ನ ಅಪಾಯದ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಡಿ.ಡಿ.ಪಿ.ಐ ವರ್ಧನ್ ಸೂಚಿಸಿದ್ದಾರೆ.

ಶಾಲೆಯ ಮುಖ್ಯಸ್ಥರು, ಅಪಾಯಕಾರಿ ಬ್ಲೂವೇಲ್ ಗೇಮ್ ಬಗ್ಗೆ ಮಕ್ಕಳು ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಅರಿವು ಮೂಡಿಸುವಂತೆ ಸೂಚಿಸಿರುವ ಡಿ.ಡಿ.ಪಿ.ಐ ವರ್ಧನ್. ಬ್ಲೂವೇಲ್ ಗೇಮ್ ಗಾಗಿ ಹುಡುಕಾಟ ನಡೆಸಿರುವ ದೇಶದ ಪ್ರಮುಖ ನಗರಗಳ ಪೈಕಿ ಇಡೀ ದೇಶದಲೇ 9 ನೇ ಸ್ಥಾನದಲ್ಲಿರುವ ಮೈಸೂರು, ಇಡೀ ರಾಜ್ಯದಲ್ಲಿ 1 ನೇ ಸ್ಥಾನದಲ್ಲಿರುವುದು ಆತಂಕ ಸೃಷ್ಟಿಸಿದೆ.

ಮೈಸೂರಿನನಂತರ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಇಡೀ ದೇಶದಲ್ಲೇ ಬ್ಲೂವೇಲ್ ಗೇಮ್ ಹುಡುಕಾಟದಲ್ಲಿ 23ನೇ ಸ್ಥಾನದಲ್ಲಿದೆ. ಬ್ಲೂವೇಲ್ ಗೇಮ್ ಹುಡುಕಾಟದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರನ್ನೇ ಹಿಂದಿಕ್ಕಿರುವ ಮೈಸೂರು. ಕಳೆದ ಮೂರು ತಿಂಗಳ ಅವಧಿಯಲ್ಲಿ ಮೈಸೂರಿನಲ್ಲಿ ಅತಿ ಹೆಚ್ಚು ಮಂದಿ ಅಪಾಯಕಾರಿ ಬ್ಲೂವೇಲ್ ಗೇಮ್ ಗಾಗಿ ತೀವ್ರ ಹುಡುಕಾಡ ನಡೆಸಿದ್ದಾರೆ.

ಇದರಿಂದ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಶಾಲಾ ಹಂತದಲ್ಲೇ ಬ್ಲೂವೇಲ್ ಗೇಮ್ ನ ಅಪಾಯದ ಬಗ್ಗೆ, ದುಷ್ಪರಿಣಾಮದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಮುಂದಾಗಿದೆ.  ಅಗತ್ಯ ಬಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಅದರ ನೆರವು ಪಡೆಯುವಂತೆಯೂ ಸೂಚಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ