ರೌಡಿ ಮೇಲೆ ಹಲ್ಲೇ: ಆರೋಪಿಗಳು ಶರಣು !

Kannada News

09-09-2017

ಬೆಂಗಳೂರು: ಶಿವಾಜಿನಗರ ರೌಡಿಶೀಟರ್ ನಾಸಿರ್ ಅಲಿಯಾಸ್ ಚೋಟನ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಿಜೆ ಹಳ್ಳಿ ಪೊಲೀಸರಿಗೆ, ಆರೋಪಿಗಳು ಶರಣಾಗಿದ್ದಾರೆ. ಶಾಕಿರ್, ಅಮ್ಜದ್ ಸೇರಿ ನಾಲ್ವರು ಅಂದರ್ ಆಗಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆ, ಸೆಪ್ಟೆಂಬರ್ 7 ರಂದು, ಶ್ಯಾಂಪುರ ಬಳಿ ಚೋಟನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡ ಚೋಟನ್ ನನ್ನ ನಿಮ್ಹಾನ್ಸ್ ಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶರಣಾಗಿರುವ ಆರೋಪಿಗಳನ್ನು ಡಿಜೆ ಹಳ್ಳಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ