ಬಿಜೆಪಿ ಸ್ಕೂಲ್…?

Kannada News

08-09-2017

ನೀವು, ನಿಮ್ಮ ಕುಟುಂಬದವರು ಎಲ್ಲರೂ ಕಡ್ಡಾಯವಾಗಿ ಬಿಜೆಪಿ ಸೇರ್ಕೋಬೇಕು, ಗೊತ್ತಾಯ್ತಾ? ಇದನ್ನು ಯಾರು ಯಾರಿಗೆ ಹೇಳಿರಬೇಕು ಊಹೆ ಮಾಡಿ…ಬಿಜೆಪಿ ಅವರು ತಮ್ಮ ಅಭಿಮಾನಿಗಳಿಗೆ ಹೇಳಿರಬೇಕು ಅಂತೀರಾ…ಇಲ್ಲಪ್ಪಾ ಇಲ್ಲ. ದೆಹಲಿಯ ಒಂದು ಪ್ರತಿಷ್ಠಿತ ಶಾಲೆಯವರು, ತಮ್ಮ ಸಂಸ್ಥೆಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಮಾತು ಹೇಳಿದ್ದಾರಂತೆ. ಯಾವುದಪ್ಪಾ ಇದು ಪೊಲಿಟಿಕಲ್ ಸ್ಕೂಲು ಅಂತೀರಾ? ಇದು ಬೆಂಗಳೂರಿನ ರ್ಯಾನ್ ಇಂಟರ್ ನ್ಯಾಷನಲ್ ಸ್ಕೂಲ್.(Ryan International). ಈ ಸ್ಕೂಲ್ ನೋರು ಯಾಕೆ ಹಿಂಗೆಲ್ಲಾ ಮಾಡ್ತಿದ್ದಾರೆ ಅಂದ್ರೆ, ಈ ಸ್ಕೂಲಿನ ಎಂಡಿ ಅಂದರೆ ವ್ಯವಸ್ಥಾಪಕ ನಿರ್ದೇಶಕಿ ಗ್ರೇಸ್ ಪಿಂಟೊ ಅನ್ನೋರು, ಬಿಜೆಪಿಯ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದಾರಂತೆ, ಅದಕ್ಕೇ ಹೀಗೆ ಮಾಡ್ತಿರಬೇಕು. ‘ನಮ್ಮಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ವಸಂತೋಷದಿಂದ ಬಿಜೆಪಿಗೆ ಸೇರೋದಾದ್ರೆ ಸಂತೋಷ, ಆದರೆ ನಾವು ಯಾರಿಗೂ ಒತ್ತಾಯ ಮಾಡಿಲ್ಲ’ ಅನ್ನುವುದು ಆ ಶಾಲೆಯ ಅಧಿಕೃತ ಹೇಳಿಕೆ. ಆದರೆ, ‘ನೀವು ಬಿಜೆಪಿಯ ಶುಲ್ಕ ರಹಿತ ಸದಸ್ಯತ್ವ ನೋಂದಣಿ ದೂರವಾಣಿ ಸಂಖ್ಯೆಗೆ ಫೋನ್ ಮಾಡಬೇಕು, ಆ ನಂತರ ಅಲ್ಲಿ ನಿಮಗೆ ಸಿಗುವ ಮೆಂಬರ್ ಶಿಪ್ ಸಂಖ್ಯೆ ನಮಗೆ ಕೊಡಬೇಕು’ ಅಂತ ಶಾಲೆಯ ಆಡಳಿತ ಮಂಡಳಿ ಹೇಳಿದೆ ಅನ್ನೋದು ಶಿಕ್ಷಕರ ಆರೋಪ. ಕೆಲವು ಶಿಕ್ಷಕರು ಹೇಳುವ ಪ್ರಕಾರ, ಹೀಗೆ ಮಾಡುವವರೆಗೆ ಅವರಿಗೆ ಸಂಬಳವನ್ನೂ ಬಿಡುಗಡೆ ಮಾಡಿರಲಿಲ್ಲವಂತೆ.

ಶಿಕ್ಷಣ ಸಂಸ್ಥೆಗಳು ತಮ್ಮ ರಾಜಕೀಯ ಒಲವನ್ನು ಈ ರೀತಿ ಬಹಿರಂಗವಾಗಿ ವ್ಯಕ್ತಪಡಿಸೋದು, ಮಕ್ಕಳನ್ನು, ಪೋಷಕರನ್ನು ಮತ್ತು ಶಿಕ್ಷಕರನ್ನು ಯಾವುದೋ ಒಂದು ಪಕ್ಷಕ್ಕೆ ಸೇರ್ಪಡೆ ಆಗಿ ಅಂತ ಬಲವಂತ ಮಾಡುವುದು ತಪ್ಪು. ಇಂಥ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ, ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವೇ ಗಬ್ಬೆದುಹೋಗುತ್ತದೆ ಅಷ್ಟೇ.

ಅಂದಹಾಗೆ, ಬೆಂಗಳೂರಿನಲ್ಲೂ ಈ ರ್ಯಾನ್ ಇಂಟರ್ ನ್ಯಾಷನಲ್ ಶಾಲೆ ಇದೆ. ಇಲ್ಲಿನವರು ಏನು ಮಾಡುತ್ತಿದ್ದಾರೋ ಒಂದಿಷ್ಟು ನೋಡಬೇಕಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ