ನನಗೆ ಮಂಡ್ಯ-ಮೈಸೂರು ಎರಡೂ ಒಂದೇ.. !

Kannada News

08-09-2017

ಮಂಡ್ಯ: ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮಂಡ್ಯದಲ್ಲಿಂದು ಮಾತನಾಡುದ್ದು, ನಿನ್ನೆಯಿಂದ ತನಿಖೆ ಆರಂಭವಾಗಿದೆ, ಇಂತಿಷ್ಟೇ ದಿನದಲ್ಲಿ ತನಿಖೆ ಮುಗಿಯುತ್ತೆ ಅಂತಾ ಹೇಳೋಕೆ ಆಗಲ್ಲ, ನಿಷ್ಪಕ್ಷಪಾತ ತನಿಖೆಗೆ ಹೇಳಿದ್ದೀನಿ ಎಂದರು. ಎಸ್.ಐ.ಟಿ ತನಿಖೆಗೆ ಎರಡು ವಾರ ಗಡುವು ವಿಚಾರ ಕುರಿತಂತೆ, ಎರಡು ವಾರದೊಳಗೆ ತನಿಖೆಗೆ ಪೂರ್ಣಗೊಳ್ಳದಿದ್ದರೆ ಸಿಬಿಐಗೆ ಗೌರಿ ಕುಟುಂಬಸ್ಥರು ಆಗ್ರಹಿಸಿದ್ದಾರೆ, ಅವರ ಮನೆಯವರು ನನಗೆ ಆತ್ಮೀಯರಾಗಿದ್ದಾರೆ, ನಾನು ಅವರ ಜೊತೆ ಮಾತಾಡ್ತೀನಿ ಎಂದರು.

ಇನ್ನು ಮಂಡ್ಯ ರೈತರ ಬೆಳೆಗೆ ನೀರು ಬಿಡ್ತೀವಿ, ಈ ಸಂಬಂಧ ಐಸಿಸಿ ಸಭೆಯಲ್ಲಿ ತೀರ್ಮಾನವಾಗಲಿದೆ. ಸಭೆ, ಬಳಿಕ ಕಟ್ಟು ಪದ್ದತಿಯನ್ವಯ ನೀರು ಬಿಡುಗಡೆ ಮಾಡಲಿದೆ ಎಂದರು.

ನನಗೆ ಮಂಡ್ಯ ಜಿಲ್ಲೆ ಬಗ್ಗೆ ವಿಶೇಷ ಪ್ರೀತಿ ಇದೆ, ಮೈಸೂರು-ಮಂಡ್ಯ ಎರಡೂ ಒಂದೇ ನನಗೆ. ಈ ಹಿಂದೆ ಎರಡೂ ಒಂದೇ ಜಿಲ್ಲೆ ಆಗಿದ್ವು, ನಾನು ಓದುವಾಗಲೂ ಹೆಚ್ಚಿನ ಗೆಳೆಯರಿದ್ದದ್ದು ಮಂಡ್ಯದಲ್ಲೇ, ಆದ್ದರಿಂದಲೇ ಮಂಡ್ಯ ಜಿಲ್ಲೆ ಮೇಲೆ ವಿಶೇಷ ಪ್ರೀತಿ ಇದೆ, ಯಾವತ್ತೂ ಮಂಡ್ಯವನ್ನು, ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದರು.

ಮೈಷುಗರ್ ಕಾರ್ಖಾನೆ, ಪಾಂಡವಪುರ ಸಹಕಾರ ಕಾರ್ಖಾನೆ ಸೇರಿದಂತೆ ಹಲವಾರು ಯೋಜನೆಗಳಿಗೆ ನೂರಾರು ಕೋಟಿ ಅನುದಾನ ಕೊಟ್ಟಿದ್ದೀನಿ. ಜೆಡಿಎಸ್ ಸಂಸದ ಪುಟ್ಟರಾಜು, ಶಾಸಕರಾದ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಪುಟ್ಟಣ್ಣಯ್ಯ ಕೇಳಿದ ಯೋಜನೆಗಳನ್ನೆಲ್ಲಾ ಮಂಜೂರು ಮಾಡಿದ್ದೀನಿ, ಇದನ್ನೆಲ್ಲಾ ಹೇಳ್ಬೇಕಲ್ವಾ ಪುಟ್ಟರಾಜು? ಎಂದು ಮಂಡ್ಯ ಜೆಡಿಎಸ್ ಸಂಸದ ಪುಟ್ಟರಾಜುಗೆ ತಮಾಷೆ ಮಾಡಿದರು. ಇದು ಚುನಾವಣೆ ಸಂದರ್ಭ,ಇದನ್ನೆಲ್ಲಾ ಹೇಳದಿದ್ದರೇ ಹೇಗೆ ಪುಟ್ಟರಾಜು? ಮಂಡ್ಯ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದು ನಾನೆ. ಪುಟ್ಟರಾಜು, ಚಲುವರಾಯಸ್ವಾಮಿ ಇಬ್ಬರೂ ನನಗೆ ಆಪ್ತರೆ. ಚಲುವರಾಯಸ್ವಾಮಿ ಈಗ ನಮ್ಮೊಟ್ಟಿಗೆ ಬಂದರ್ವೆ. ಪುಟ್ಟರಾಜು ಜೆಡಿಎಸ್ ನಲ್ಲಿದ್ದರೂ ನನ್ನ ಏಳ್ಗೆಯನ್ನೇ ಬಯಸ್ತಾನೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ