ವೈದ್ಯರ ನಿರ್ಲಕ್ಷ್ಯ: ಹಸುಗೂಸು ಸಾವು !

Kannada News

08-09-2017

ಚಿತ್ರದುರ್ಗ: ವೈದ್ಯರ ನಿರ್ಲಕ್ಷ್ಯದಿಂದ ನಾಲ್ಕು ದಿನದ ಹಸುಗೂಸು ಸಾವನ್ನಪ್ಪಿರುವ ದಾರುಣ ಘಟನೆಯು ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ, ನಂದೀಪುರ ಗ್ರಾಮದ ನಾಗವೇಣಿ ಮತ್ತು ವಿರೂಪಾಕ್ಷ ದಂಪತಿಗಳ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಂದೀಪುರದ ನಾಗವೇಣಿ ಅವರಿಗೆ, ನಾಲ್ಕು ದಿನದ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು, ತಾಯಿ ಜೊತೆಯಲ್ಲೇ ಇದ್ದ ಮಗು, ಮಗುವಿನ ಆರೋಗ್ಯ ಸ್ಥಿತಿ ಏರುಪೇರಾಗಿತ್ತು, ಆದರೂ ತುರ್ತು ನಿಗಾಘಟಕಕ್ಕೆ ದಾಖಲಿಸಿಕೊಳ್ಳದೆ ವೈದ್ಯರು ನಿರ್ಲಕ್ಷ್ಯ ತೋರಿದ್ದು ಮಗು ಸಾವನ್ನಪ್ಪಿದೆ. ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರ ವಿರುದ್ದ ಮೃತ ಮಗುವಿನ ಪೋಷಕರು ಆರೋಪಿಸುತ್ತಿದ್ದು, ಮಗುವನ್ನು ಕಳೆದುಕೊಂಡ ತಯಿಯ ನೋವು ಹೇಳತೀರದಾಗಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ