ಬಸ್ ತಡೆದು ದರೋಡೆ: ನಾಲ್ವರ ಬಂಧನ

Kannada News

08-09-2017

ರಾಮನಗರ: ಮಧ್ಯರಾತ್ರಿ ಕೇರಳ ಸರ್ಕಾರಿ ಬಸ್ ತಡೆದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು, ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮೀನ್ ಹುಸೇನ್‌, ಶುಹೇಬ್, ಉಮರ್ ಫಾರುಕ್ ಹಾಗೂ ಮೊಹಮದ್ ಅಬ್ದುಲ್ ಬಂಧಿತ ಆರೋಪಿಗಳು. ಬಂಧಿತರೆಲ್ಲರು ಮೂಲತಃ ಮಂಡ್ಯ ನಿವಾಸಿಗಳು ಎಂದು ತಿಳಿದು ಬಂದಿದೆ. ಕಳೆದ ಆಗಸ್ಟ್ 31ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ, ಚನ್ನಪಟ್ಟಣ ತಾಲ್ಲೂಕಿನ, ಬೆಂಗಳೂರು-ಮೈಸೂರು ಹೆದ್ದಾರಿ ಬಳಿಯ ದೊಡ್ಡ ಮಳೂರು ಗ್ರಾಮದ ಬಳಿ ದರೋಡೆ ನಡೆಸಲಾಗಿತ್ತು. ಕೇರಳದಿಂದ ಬೆಂಗಳೂರಿಗೆ ತೆರಳುತಿದ್ದ ವೇಳೆ ಹೆದ್ದಾರಿಯಲ್ಲಿ, ಬಸ್ ತಡೆದು, ಚಾಕು ತೋರಿಸಿ ಈ ಕೃತ್ಯ ಎಸಗಿದ್ದರು. ಆರೋಪಿಗಳಿಂದ ಒಂದು ಚೈನ್, ಎರಡು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ