ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಮಳಿಗೆ !

Kannada News

08-09-2017 410

ಮೈಸೂರು: ಮೈಸೂರಿನ ಅಗ್ರಹಾರ ವೃತ್ತದ ಬಳಿಯಿರುವ ಚಿಕ್ಕ ಮಾರ್ಕೆಟ್ ನಲ್ಲಿ ಆಕಸ್ಮಿಕ ಬೆಂಕಿ ತಗುಲಿ, ಹೊತ್ತಿ ಉರಿದ ಬೆಂಕಿಯಿಂದ ಮಾರುಕಟ್ಟೆಯಲ್ಲಿನ ಎರಡು ತರಕಾರಿ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ವಿಷಯ ತಿಳಿಯುತ್ತಿದ್ದಂತೆ, ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಅಂಗಡಿಗಳಿಗೆ ಹರಡದಂತೆ ಅಗ್ನಿಶಾಮಕ ದಳದ ಸಿಬ್ಬಂದಿ, ಯಶಸ್ವಿಯಾ ಕಾರ್ಯಾಚರಣೆ ನಡೆಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹಾನಿಗೊಳಗಾದ ತರಕಾರಿ ಮಳಿಗೆ ಪ್ರಮೋದ್ ಎಂಬುವರಿಗೆ ಸೇರಿದ್ದಾಗಿದೆ. ಯು.ಪಿ.ಎಸ್., ತರಕಾರಿ ತೂಗುವ ಎಲೆಕ್ಟ್ರಾನಿಕ್ ಯಂತ್ರ ಹಾಗೂ ತರಕಾರಿ ಸೇರಿದಂತೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ