ಗೌರಿ ಹತ್ಯೆ: ಕೇಬಲ್ ರವಿ ವಿಚಾರಣೆ !

Kannada News

07-09-2017

ಬೆಂಗಳೂರು: ಗೌರಿ ಲಂಕೇಶ್ ಕೊನೆಯ ಬಾರಿ ಮೊಬೈಲ್ ನಲ್ಲಿ ಮಾತನಾಡಿದವರ ವಿವರದ ಜಾಡು ಹಿಡಿದ ಪೊಲೀಸರು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಕೇಬಲ್ ರವಿ, ಮುಕೇಶ್ ಮತ್ತು ಪ್ರಕಾಶ್ ಅವರನ್ನು ಆರ್.ಆರ್.ನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಗೌರಿ ಲಂಕೇಶ್ ಕೊನೆಯ ಬಾರಿ ಫೋನ್ ನಲ್ಲಿ ಮಾತನಾಡಿದ್ದ ಕೇಬಲ್ ರವಿ ಎಂಬಾತನ ಜೊತೆ, ಮನೆಯಲ್ಲಿ ಕೇಬಲ್ ಸರಿ ಇಲ್ಲ ಎಂದು ಗೌರಿಯವರು ಮಂಗಳವಾರ ಸಂಜೆ 7:30ಕ್ಕೆ ರವಿಗೆ ಫೋನ್ ಮಾಡಿ ತಿಳಿಸಿರುತ್ತಾರೆ. ಅದಕ್ಕೆ ಆತ 10 ಗಂಟೆಗೆ ಮನೆಗೆ ಬರ್ತೀವಿ ಎಂದು ಹೇಳಿರುತ್ತಾರೆ. 10 ಗಂಟೆಗೆ ಬೇಡ 8 ಗಂಟೆಗೆ ಮನೆಗೆ ಬನ್ನಿ. ಹತ್ತು ನಿಮಿಷ ಮನೆ ಹತ್ತಿರ ಇರುತ್ತೇನೆ ಎಂದು ಗೌರಿ ಹೇಳುತ್ತಾರೆ. ಕೇಬಲ್ ಹುಡುಗರು ಬರುತ್ತಾರೆಂದು ಗೌರಿ ಲಂಕೇಶ್ ಬೇಗ ಮನೆಗೆ ಬಂದಿರುತ್ತಾರೆ. ಅದಾದ ಬಳಿಕ ಗೌರಿ ಲಂಕೇಶ್ ಅವರ ಮೊಬೈಲ್'ಗೆ ಮತ್ಯಾವ ಕರೆಯೂ ಬಂದಿರುವುದಿಲ್ಲ. ಕೇಬಲ್ ರವಿ ತನ್ನ ಕಡೆಯ ಇಬ್ಬರು ಹುಡುಗರನ್ನು ರಾತ್ರಿ 8:20ಕ್ಕೆ ಗೌರಿ ಲಂಕೇಶ್ ಮನೆಗೆ ಕಳುಹಿಸುತ್ತಾನೆ. ಕೇಬಲ್ ಹುಡುಗರಾದ ಪ್ರಕಾಶ್ ಮತ್ತು ಮುಕೇಶ್ ಅವರು ಸ್ಥಳಕ್ಕೆ ಬಂದಾಗ ಗೌರಿ ಲಂಕೇಶ್ ಹತ್ಯೆಯಾಗಿ ಶವವಾಗಿ ಬಿದ್ದಿರುತ್ತಾರೆ. ಈ ವಿಚಾರವನ್ನು ಈ ಮೂವರು ಕೇಬಲ್ ಹುಡುಗರು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ