ನಾನು ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದೇನೆ..?

Kannada News

07-09-2017

ರಾಮನಗರ: ನಾನು ನನ್ನ ಸ್ವಕ್ಷೇತ್ರವಾದ ಚಾಮರಾಜಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು, ಜೆಡಿಎಸ್ ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ. ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕಿಗೆ ಶಾಸಕ ಜಮೀರ್ ಅಹಮದ್ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಅವರು, ಕಾರ್ಯಕ್ರಮದ ನಿಮಿತ್ತವಾಗಿ ಮೈಸೂರಿಗೆ ತೆರಳುತ್ತಿದ್ದ ವೇಳೆ ಕಾರ್ಯಕರ್ತರನ್ನು ಹಾಗೂ, ಜೆಡಿಎಸ್ ನ ಕೆಲವು ನಗರಸಭಾ ಸದಸ್ಯರು, ಕೆಲವು ಮುಖಂಡರನ್ನು ಭೇಟಿ ಮಾಡಲು ಬಂದಿದ್ದೇನೆ ಎಂದರು. ಜೆಡಿಎಸ್ ನಿಂದ ಅನಿತಾ ಕುಮಾರ್ ಸ್ವಾಮಿ ಅವರು ಚನ್ನಪಟ್ಟಣದಲ್ಲಿ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆ ಮಾಹಿತಿ ಇಲ್ಲ ಎಂದ ಅವರು, ಕಳೆದ ಬಾರಿ ದೇವೇಗೌಡರೇ, ನಮ್ಮ ಕುಟುಂಬದಿಂದ ಕುಮಾರ ಸ್ವಾಮಿ ಹಾಗೂ ರೇವಣ್ಣ ಮಾತ್ರ ಸ್ಪರ್ಧೆ ಮಾಡ್ತಾರೆ ಅಂತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದರು. ನಾನು ಯಾವುದೇ ಪ್ರಚಾರಕ್ಕಾಗಿ ಬಂದಿಲ್ಲ, ನನ್ನ ತುಂಬಾ ವರ್ಷದ ಸ್ನೇಹಿತರನ್ನು ನೋಡಲು ಬಂದಿದ್ದೇನೆ, ಎಲ್ಲಾ ಬಂಡಾಯ ಶಾಸಕರು ಡಿಸೆಂಬರ್ ನಲ್ಲಿ ಅಧೀಕೃತವಾಗಿ ಕಾಂಗ್ರೆಸ್ ಸೇರಲಿದ್ದೇವೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ