ಪತ್ರಕರ್ತೆ ಹತ್ಯೆ: ಐಜಿಪಿ-ಎಸ್ಐಟಿ ಸಭೆ !

Kannada News

07-09-2017

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೈದ ದುಷ್ಕರ್ಮಿಗಳ ಪತ್ತೆಗಾಗಿ ರಚಿಸಲಾಗಿರುವ ವಿಶೇಷ ಪೊಲೀಸ್ ತಂಡ(ಎಸ್‍ಐಟಿ)ದ ಅಧಿಕಾರಿಗಳು ಸಭೆ ನಡೆಸಿ, ಇಲ್ಲಿವರೆಗಿನ ತನಿಖೆಯ ವಿವರಗಳು ದೊರೆತಿರುವ ಮಾಹಿತಿಯ ಪರಾಮರ್ಶೆ ನಡೆಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಸಿಐಡಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ಪೊಲೀಸ್ ಮಹಾನಿರೀಕ್ಷಕ(ಐಜಿಪಿ) ಬಿ.ಕೆ.ಸಿಂಗ್ ನೇತೃತ್ವದ ವಿಶೇಷ ತನಿಖಾಧಿಕಾರಿಯಾಗಿರುವ ಡಿಸಿಪಿ ಅನುಚೇತ್ ಅವರನ್ನೊಳಗೊಂಡ ಅಧಿಕಾರಿಗಳು, ಸುಮಾರು 3ಗಂಟೆಗಳ ಕಾಲ ಗೌರಿ ಹತ್ಯೆಗೆ ಪತ್ತೆಗೆ ಮೊದಲು ರಚಿಸಲಾಗಿದ್ದ ಮೂರು ವಿಶೇಷ ಪೊಲೀಸ್ ತಂಡಗಳು ತನಿಖೆ ತನಿಖೆಯ ವಿವರಗಳು ದುಷ್ಕರ್ಮಿಗಳ ಚಲನವಲನಗಳ ಮಾಹಿತಿಗಳನ್ನು ಪರಿಶೀಲನೆ ನಡೆಸಿದರು.

ಗೌರಿ ಅವರ ನಿವಾಸದಲ್ಲಿ ಬಳಿಯ ಸಿಸಿ ಟಿವಿ ಕ್ಯಾಮಾರ, ಸುತ್ತಮತ್ತಲ 37 ಸಿಸಿ ಟಿವಿಕ್ಯಾಮಾರಗಳು ಅಲ್ಲದೇ ಗೌರಿ ಅವರನ್ನು ಕಾರಿನಲ್ಲಿ ಹಿಂಬಾಲಿಸಿರುವ ರಸ್ತೆಗಳ ಸುಮಾರು 100ಕ್ಕೂ ಸಿಸಿ ಟಿವಿ ಕ್ಯಾಮಾರಗಳಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಅಧುನಿಕ ತಂತ್ರಜ್ಞಾನ ನೆರವಿನೊಂದಿಗೆ ಪರಿಶೀಲನೆ ನಡೆಸಿದರು.

ಗೌರಿ ಅವರ ಮನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕೃತ್ಯ ನಡೆದಾಗ ಕತ್ತಲಿದ್ದರಿಂದ ಆರೋಪಿಯ ಚಹರೆ ಸರಿಯಾಗಿ ಕಾಣಿಸುತ್ತಿಲ್ಲ ಅದನ್ನು ತಂತ್ರಜ್ಞಾನ ನೆರವಿನೊಂದಿಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಲಾಗುತ್ತಿದೆ, ಜೊತೆಗೆ ಗೌರಿ ಅವರ ಫೋನ್ ಕರೆಗಳ ಸಿಡಿಆರ್ ಚೆಕ್ ಮಾಡುತ್ತಿದ್ದು, ಕರೆಗಳ ವಿನಿಮಯವನ್ನು ಶೋಧಿಸಲಾಗುತ್ತಿದೆ. ಅಲ್ಲದೇ ಮಿಸ್ ಕಾಲ್‍ ಗಳು, ಬೆದರಿಕೆ ಕರೆ ಮಾಡಿದವರನ್ನು ವಿಚಾರಣೆ ನಡೆಸಲು ಸಭೆ ಕಾರ್ಯತಂತ್ರ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.

ಕೃತ್ಯವನ್ನು ನೋಡಿದ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಮೊದಲಿಗೆ ಹಂತಕರ ರೇಖಾಚಿತ್ರ ರಚಿಸುವುದು ಅಲ್ಲದೇ ಹಂತಕರಿಗೆ ಹೋಲಿಕೆಯಾಗುವ ಆರೋಪಿಗಳ ಹಳೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವುದು, ಬೆರಳಚ್ಚು ಆಧರಿಸಿ ಹಂತಕರ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳುವುದು ಸೇರಿ ಎಲ್ಲ ಆಯಾಮಗಳಿಂದಲೂ ತನಿಖೆ ಕೈಗೊಳ್ಳಲು ಬಿ.ಕೆ.ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗೌರಿ ಅವರ ಮನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕೃತ್ಯ ನಡೆದಾಗ ಕತ್ತಲಿದ್ದರಿಂದ ಆರೋಪಿಯ ಚಹರೆ ಸರಿಯಾಗಿ ಕಾಣಿಸುತ್ತಿಲ್ಲ ಅದನ್ನು ತಂತ್ರಜ್ಞಾನ ನೆರವಿನೊಂದಿಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಲಾಗುತ್ತಿದೆ ಜೊತೆಗೆ ಗೌರಿ ಅವರ ಫೋನ್ ಕರೆಗಳ ಸಿಡಿಆರ್ ಚೆಕ್ ಮಾಡುತ್ತಿದ್ದು, ಕರೆಗಳ ವಿನಿಮಯವನ್ನು ಶೋಧಿಸಲಾಗುತ್ತಿದೆ.ಅಲ್ಲದೇ ಮಿಸ್ ಕಾಲ್‍ ಗಳು, ಬೆದರಿಕೆ ಕರೆ ಮಾಡಿದವರನ್ನು ವಿಚಾರಣೆ ನಡೆಸಲು ಸಭೆ ಕಾರ್ಯತಂತ್ರ ರೂಪಿಸಿದೆ.

ವಿಚಾರವಾಧಿಗಳಾದ ಪನ್ಸಾರೆ,ದಾಬೋಲ್ಕರ್ ಹಾಗೂ ಕಲ್ಬುರ್ಗಿ ಅವರ ಹತ್ಯೆ ಸಂಬಂಧ ಇಲ್ಲಿಯವರೆಗೆ ನಡೆದಿರುವ ತನಿಖೆಯ ವಿವರಗಳನ್ನು ಪರಾಮರ್ಶೆ ನಡಸಿ ಕೃತ್ಯಗಳಿಗೆ ಬಳಸಿದ ಒಂದೇ ಮಾದರಿಯ ಪಿಸ್ತೂಲ್,ಗುಂಡು ಹಾರಿಸಿದ ರೀತಿ ಸೈದಾಂತಿಕ ಹಿನ್ನಲೆಯಲ್ಲಿ ಕಟ್ಟಿಕೊಂಡ ವಿರೋಧವನ್ನು ಪರಿಶೀಲಿಸಿ ದುಷ್ಕರ್ಮಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಸಿಸಿಬಿ ಡಿಸಿಪಿ ಜಿನೇಂದ್ರ ಕನಗಾವಿ, ಮೈಸೂರು ಪೊಲೀಸ್ ಅಕಾಡೆಮಿ ನಿರ್ದೇಶಕ ಹರೀಶ್ ಪಾಂಡೆ, ಡಿವೈಎಸ್‍ಪಿಗಳಾದ ರವಿಕುಮಾರ್, ಸಕ್ರಿ, ಜಗನ್ನಾಥ್ ರೈ, ನಾಗರಾಜ್ ಸೇರಿ ಎಸ್‍ಐಟಿಯಲ್ಲಿ 19  ಮಂದಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಮೊದಲು ಹಂತಕರ ಪತ್ತೆಗೆ ಕೆಂಗೇರಿ ಗೇಟ್ ಎಸಿಪಿ, ಚಿಕ್ಕಪೇಟೆ ಎಸಿಪಿ ನೇತೃತ್ವದಲ್ಲಿ ಎರಡು ತನಿಖಾ ತಂಡಗಳ ಜೊತೆಗೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು.

ಈ ನಡುವೆ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಸಹೋದರಿ ಕವಿತಾ ಲಂಕೇಶ್ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆ. 302, ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ