ಗೌರಿ ಬಳಗ: ರಾಷ್ಟ್ರಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ !

Kannada News

07-09-2017 410

ಬೆಂಗಳೂರು: ವಿಚಾರವಾದಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ಪ್ರಗತಿಪರ ಸಂಘಟನೆಗಳು ಗೌರಿ ಬಳಗವನ್ನು ಅಸ್ಥಿತ್ವಕ್ಕೆ ತಂದು ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಲು ಮುಂದಾಗಿವೆ. ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಅನೌಪಚಾರಿಕ ಸಭೆ ನಡೆಸಿದ ಪ್ರಗತಿಪರ ಸಂಘಟನೆಗಳ ಮುಖಂಡರು ಗೌರಿ ಬಳಗದ ಮೂಲಕ ದೆಹಲಿ ಸೇರಿದಂತೆ ರಾಜ್ಯ, ಜಿಲ್ಲಾ ಮಟ್ಟಗಳಲ್ಲೂ ನಿರಂತರ ಸರಣಿ ಪ್ರತಿಭಟನೆ ಸಭೆ ನಡೆಸಲು ನಿರ್ಣಯ ಕೈಗೊಂಡಿವೆ. ನಿರಂತರವಾಗಿ ಸರಣಿ ಪ್ರತಿಭಟನೆ ನಡೆಸುವ ಮೊದಲ ಭಾಗವಾಗಿ ಸೆಪ್ಟಂಬರ್ 12ಕ್ಕೆ ಬೃಹತ್ ಜನಾಂದೋಲನ ನಡೆಸಲು ಸಿದ್ದತೆ ನಡೆಸಲಾಗಿದೆ.

ಗೌರಿ ಲಂಕೇಶ್ ಅವರ ಒಡನಾಡಿ ಜನಶಕ್ತಿಯ ಡಾ.ವಾಸು, ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್, ಮಾವಳ್ಳಿ ಶಂಕರ್, ಜಿ.ಎನ್.ನಾಗರಾಜ್, ಚುಕ್ಕಿ ನಂಜುಂಡಸ್ವಾಮಿ, ರವಿ ಕೃಷ್ಣಾರೆಡ್ಡಿ, ಕೆ.ನೀಲಾ ಸೇರಿದಂತೆ ದಲಿತ, ಎಡಪಂಥೀಯ ಸಂಘಟನೆಗಳು, ಮತ್ತಿತರ ಪ್ರಗತಿಪರ ಸಂಘಟನೆಗಳ ಮುಖಂಡರು ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಿದ್ದರು. ಗೌರಿ ಹಂತಕರು ಸಿಗುವವರೆಗೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ