ಕಾರಿಗೆ ಲಾರಿ ಡಿಕ್ಕಿ:ದಂಪತಿ ಸಾವು !

Kannada News

07-09-2017

ಬೆಂಗಳೂರು: ಗೌರಿಬಿದನೂರು ತಾಲ್ಲೂಕಿನ ಅಲ್ಕಾಪುರ ಗೇಟ್ ಬಳಿ, ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಒಮ್ನಿ ಕಾರಿನಲ್ಲಿ ಹೋಗುತ್ತಿದ್ದ ದಂಪತಿ ಮೃತಪಟ್ಟು ಮೂವರು ಮಕ್ಕಳು ಗಾಯಗೊಂಡಿರುವ ಹೃದಯ ವಿದ್ರಾವಕ  ಘಟನೆ ನಡೆದಿದೆ.

ಮೃತರನ್ನು ಅಲ್ಕಾಪುರದ (50) ವರ್ಷದ ವೇಣುಗೋಪಾಲ ಶರ್ಮಾ ಹಾಗೂ ಆತನ ಪತ್ನಿ ಸ್ವರ್ಣಲತಾ(44)ಎಂದು ಗುರುತಿಸಲಾಗಿದೆ, ಗಾಯಗೊಂಡಿರುವ ದಂಪತಿಯ ಮೂವರು ಮಕ್ಕಳಾದ ರಮ್ಯಾ, ಮಾನಸಾ ಮತ್ತೊಂದು ಚಿಕ್ಕ ಮಗು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡು ಮೂಲದ ರಾಮಲಿಂಗಂ ಕನ್ ಸ್ಟ್ರಕ್ಷನ್ ಸಂಸ್ಥೆಗೆ ಸೇರಿದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಮಂಚೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ, ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ