ಹುಲಿಯನ್ನು ದತ್ತು ಪಡೆದ ಟೈಗರ್ಸ್ ತಂಡ !

Kannada News

07-09-2017

ಮೈಸೂರು: ಕೆ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯ ಹವಾ ಜೋರಾಗಿದ್ದು, ಹುಬ್ಬಳ್ಳಿ ಟೈಗರ್ಸ್ ತಂಡದಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಒಂದು ಹುಲಿ ದತ್ತು ಸ್ವೀಕಾರ ಮಾಡಿದ್ದಾರೆ. ಸತತ ಮೂರನೇ ವರ್ಷ ಮೈಸೂರು ಮೃಗಾಲಯದಲ್ಲಿ ಹುಲಿಯೊಂದನ್ನು ದತ್ತು ಪಡೆದ ಹುಬ್ಬಳ್ಳಿ ಟೈಗರ್ಸ್, ಕಳೆದ ಎರಡು ವರ್ಷದಿಂದಲೂ ಹುಲಿಯನ್ನು ದತ್ತು ಪಡೆದಿತ್ತು. ಇದರ ವೆಚ್ಚಕ್ಕಾಗಿ ವರ್ಷಕ್ಕೆ ಒಂದು ಲಕ್ಷ ಹಣವನ್ನು ತಂಡ ನೀಡುತ್ತಿದೆ. ಈ ಬಾರಿಯೂ ಒಂದು ಲಕ್ಷ ಹಣ ನೀಡಿ ದತ್ತು ಸ್ವೀಕಾರ ಮಾಡಿದೆ. ಕೆಪಿಎಲ್ ನಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ತಂಡ, ಈ ಬಾರಿಯೂ ಹುಲಿ ದತ್ತು ಸ್ವೀಕಾರ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡ ವಿಶೇಷ ಎನಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ತಂಡದ ನಾಯಕ ವಿನಯ್ ಕುಮಾರ್ ಕೂಡ ಪ್ರಾಣಿ ದತ್ತು ಸ್ವೀಕರಿಸುವುದಾಗಿ ಇದೇ ವೇಳೆ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ