ಗೌರಿ ಹತ್ಯೆಗೂ ನಕ್ಸಲ್ ಗೂ ಸಂಬಂಧ ಇಲ್ಲ..?

Kannada News

07-09-2017

ಚಿಕ್ಕಮಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕ್ಕಮಗಳೂರಿನಲ್ಲಿ ಎಸ್.ಪಿ ಅಣ್ಣಾಮಲೈ, ಮಾತನಾಡಿದ್ದು, ಈವರೆಗೂ ಯಾವುದೇ ಪೊಲೀಸ್ ತಂಡಗಳು ಚಿಕ್ಕಮಗಳೂರಿಗೆ ಬಂದಿಲ್ಲ, ತನಿಖೆಯ ವಿಚಾರ ಎಸ್.ಐ.ಟಿ ತಂಡಕ್ಕೆ ಬಿಟ್ಟಿದ್ದು ಎಂದ ಅವರು, ಇಲ್ಲಿವರೆಗೂ ಚಿಕ್ಕಮಗಳೂರಿನಲ್ಲಿ ಯಾವುದೇ ವ್ಯಕ್ತಿ ಬಂಧನವಾಗಿಲ್ಲ. ನಕ್ಸಲ್ ಶರಣಾಗತಿಗೆ  ಗೌರಿ ಲಂಕೇಶ್ ಸಾಕಷ್ಟು ಶ್ರಮ ಪಟ್ಟಿದ್ರು, ಮೇಲ್ನೋಟಕ್ಕೆ ಅವರ ಹತ್ಯೆಗೂ ನಕ್ಸಲ್ ಗೂ ಸಂಬಂಧ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಕ್ಸಲ್ ಶರಣಾಗತಿ ಸಂಬಂಧಪಟ್ಟಂತೆ ವಿರೋಧಿ ನಕ್ಸಲ್ ಗುಂಪು ಈ ಕೃತ್ಯ ಮಾಡಲು ಸಾಧ್ಯವಿಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ