ಗೌರಿ ಹತ್ಯೆ: ಕೋಮುವಾದಿಗಳ ಕೈವಾಡ..?

Kannada News

07-09-2017

ಶಿರಸಿ: ಗೌರಿ ಲಂಕೇಶ್ ಹತ್ಯೆ ಖಂಡಿಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಪ್ರತಿಭಟನೆ ನಡೆಸಿದ್ದು, ಗೌರಿ ಲಂಕೇಶ್ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಚಾರವಾದಿಗಳ ಹತ್ಯೆ ನಿರಂತರವಾಗಿ ನಡೆದಿದೆ, ಭಾವೈಕ್ಯತೆಯ ರಾಷ್ಟ್ರದಲ್ಲಿ ಕೋಮು ಸಂಘರ್ಷ ದಿನೆ ದಿನೇ ಹೆಚ್ಚಾಗ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಗೌರಿ ಹತ್ಯೆಯಲ್ಲಿ ಕೋಮುವಾದಿಗಳ ಕೈವಾಡವಿದೆ, ವಿಚಾರವಾದಿಗಳನ್ನು ಟಾರ್ಗೇಟ್ ಮಾಡಿ ಕೊಲ್ಲಲಾಗ್ತಿದೆ ಎಂದು ಆಕ್ರೋಶದಿಂದ ನುಡಿದರು. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ