ರೇಪ್ ಅಂಡ್ ಮರ್ಡರ್: ಸೂಟ್ ಕೆಸ್ ನಲ್ಲಿ ಶವ

Kannada News

07-09-2017

ಬೆಳಗಾವಿ: ಕಾಲ್ ಸೆಂಟರ್ ಉದ್ಯೋಗಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮುಂಬೈ ಮೂಲಕ ಅಂಕಿತಾ ಕನೋಜಿಯಾ (23) ಮೃತ ಯುವತಿಯಾಗಿದ್ದು, ಈಕೆಯ ಶವ ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮ್ಯಾನ್ ಹೋಲ್ ನಲ್ಲಿ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ. ಅಂಕಿತಾ ಮೂಲತಃ ಮಾಹಾರಾಷ್ಟ್ರದ ನಾಗಪುರ ನಗರದವರಾಗಿದ್ದು, ಇತ್ತೀಚಿಗೆ ಉದ್ಯೋಗ ನಿಮಿತ್ತ ಮುಂಬೈಗೆ ಬಂದಿದ್ದರು. ಇದೇ ಸೆ.4ರಂದು ತನ್ನಿಬ್ಬರು ಮುಂಬೈನಲ್ಲಿ ಸ್ನೇಹಿತರೊಂದಿಗೆ ಅಂಕಿತಾ ಪಾರ್ಟಿ ಮಾಡಿದ್ದರು. ಈ ವೇಳೆ ಅಂಕಿತಾ ಹಾಗೂ ಆಕೆಯ ಇಬ್ಬರ ಸ್ನೇಹಿತರ ಮದ್ಯ ಜಗಳ ನಡೆದಿದೆ. ನಂತರ ಇಬ್ಬರು ದುಷ್ಕರ್ಮಿಗಳು ಸೇರಿಕೊಂಡು ಅಂಕಿತಾ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ. ನಂತರ ಸೂಟ್ ಕೇಸ್ ವೊಂದರಲ್ಲಿ ಶವವನ್ನು ತುಂಬಿಕೊಂಡು ಮುಂಬೈನಿಂದ ಗೋವಾ ಮಾರ್ಗವಾಗಿ ಪ್ರಯಾಣ ಆರಂಭಿಸಿದ್ದಾರೆ. ಬೆಳಗಾವಿಯ ಬಳಿಯ ಭೂತರಾಮನಟ್ಟಿ ಬಳಿ ಬರುವ ವೇಳೆಗೆ ಕಾರು ಚಾಲಕನಿಗೆ ನಿದ್ರೆ ಆವರಿಸಿದೆ. ಆತನ ಮಲಗಿದ್ದನ್ನು ಗಮಿಸಿದ ಇಬ್ಬರು ಆರೋಪಿಗಳು ಅಂಕಿತಾ ಶವ ತುಂಬಿದ್ದ ಸೂಟ್ ಕೇಸ್ ಅನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ಮ್ಯಾನ್ ಹಾಲ್ ಗೆ ಬಿಸಾಡಿದ್ದಾರೆ. ನಂತರ ಗೋವಾಕ್ಕೆ ತೆರಳಿದ್ದು ಅಲ್ಲಿ ಸೂಟ್ ಕೇಸ್  ಇಲ್ಲದೇ ಇರೋದು ಗಮನಿಸಿದ ಕಾರು ಚಾಲಕ ಈ ಬಗ್ಗೆ ಪ್ರಯಾಣಿಕರನ್ನು ಪ್ರಶ್ನಿಸುತ್ತಾನೆ. ಈ ವೇಳೆ ಈ ಭೀಕರ ಅತ್ಯಾಚಾರ, ಕೊಲೆ ಪ್ರಕರಣ ಬಹಿರಂಗವಾಗಿದೆ. ನಂತರ ಕಾರು ಚಾಲಕ ಇಬ್ಬರಿಗೆ ಪೊಲೀಸರ ಮುಂದೆ ಶರಣಾಗುವಂತೆ ಹೇಳಿದ್ದು, ಆರೋಪಿಗಳು ಮುಂಬೈನ ಥಾಣೆ ಪೊಲೀಸರ ಮುಂದೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಬೆಳಗಾವಿಯ ಕಾಕತಿ ಪೊಲೀಸರಿಗೆ ಮಾಹಿತಿ ನೀಡಿ ಸೂಟ್ ಕೇಸ್ ಇರುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಸೂಟ್ ಕೇಸ್ ನಿಂದ ತೀವ್ರ ರಕ್ತ ಹೊರಗೆ ಬಂದಿದ್ದು, ದುರ್ವಾಸನೆ ಬೀರುತ್ತಿದೆ. ಇನ್ನೂ ಅಂಕಿತಾ ತಂದೆ ಹಾಗೂ ಕುಟುಂಬಸ್ಥರು ಶವ ಸಿಕ್ಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ನಿನ್ನೆ ತಡರಾತ್ರಿ ಮುಂಬೈನ ಥಾಣೆ ಪೊಲೀಸರು ಆರೋಪಿಗಳಾದ ಅಕ್ಷಯ ತಾಳುದೆ ಮತ್ತು ಅಲ್ಕೇಶ್ ಪಾಟೀಲ್ ನ್ನ ಮುಂಬೈನಿಂದ ಬೆಳಗಾವಿಗೆ ಕರೆತಂದರು. ಕೊಲೆಮಾಡಿ ಎಸೆದ ಸ್ಥಳ ಪರಿಶೀಲನೆ ನಡೆಸಿದರು, ಸೂಟ್ ಕೇಸ್ ನಲ್ಲಿ ತುಂಬಿ ಮ್ಯಾನ ಹೋಲ್ ಗೆ ಎಸೆದಿದ್ದ ಅಂಕಿತ ಮೃತ ದೇಹವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ