ಗೌರಿ ಹತ್ಯೆ: 3 ಆಯಾಮಗಳಲ್ಲಿ ತನಿಖೆ !

Kannada News

07-09-2017 201

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು, ರಾತ್ರಿ ಹಗಲೆನ್ನದೇ ತನಿಖೆ ಚುರುಕುಗೊಳಿಸಿರೋ ಎಸ್ಐಟಿ ತಂಡ, ಮೂರು ಆಯಾಮಗಳಲ್ಲಿನ ಸಂಶಯದ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

1. ನಕ್ಸಲ್ ಪ್ರತೀಕಾರ 2. ಸೈದಾಂತಿಕ ಹಿನ್ನೆಲೆ 3. ವೈಯುಕ್ತಿಕ ಕಾರಣ.

ನಕ್ಸಲ್ ಪ್ರತೀಕಾರ: ಕ್ಷೀಣಿಸಿರುವ ನಕ್ಸಲ್ ಸಂಘಟನೆಯ ಬಲವನ್ನು ಮತ್ತಷ್ಟು ಕಡಿಮೆ ಮಾಡಲು ಗೌರಿ ಲಂಕೇಶ್ ಮಾಡುತ್ತಿದ್ದ ಪ್ರಯತ್ನ, ನಕ್ಸಲಿಸಂನ ವಾಸ್ತವಿಕತೆಯನ್ನು ಅರಿತಿದ್ದ ಗೌರಿ, ನಕ್ಸಲರನ್ನು ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನ ಮಾಡುತ್ತಿದ್ದದ್ದು, ಮಲೆನಾಡು ಭಾಗದಲ್ಲಿ ಸರ್ಕಾರದ ಮಧ್ಯವರ್ತಿಯಂತೆ ನಕ್ಸಲರನ್ನು ಪರಿವರ್ತಿಸುವ ಗೌರಿ ಲಂಕೇಶ್ ಅವರ ಪ್ರಯತ್ನದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ.

2. ಸೈದ್ಧಾಂತಿಕ ಹಿನ್ನೆಲೆ: ಪರ್ತಕರ್ತೆಯಾಗಿ, ಚಿಂತಕಿ, ಹೋರಾಟಗಾರ್ತಿಯಾಗಿ ಗೌರಿ ಲಂಕೇಶ್ ಅವರ ನಿಲುವು, ವ್ಯವಸ್ಥೆಯ ಹುಳುಕುಗಳನ್ನು ನಿಷ್ಠುರವಾಗಿ ಟೀಕಿಸುವ ಅವರ ಗುಣ, ಕೆಲ ಸಂಘಟನೆಗಳ ಕಾರ್ಯವೈಕರಿ, ನಿಲುವು, ಸೈದ್ಧಾಂತಿಕ ನೆಲೆಗಟ್ಟನ್ನು ಕಟುವಾಗಿ ಟೀಕಿಸುತ್ತಿದ್ದು, ಈ ಆಯಾಮದಲ್ಲಿಯೂ, ಎಸ್.ಐ.ಟಿ ತನಿಖೆ ಮುಂದುವರೆಸಿದೆ.

3. ವೈಯುಕ್ತಿಕ ಕಾರಣ: ಬರಹ, ಲೇಖನಿಗಳ ಮೂಲಕ ಕೆಲವು ವ್ಯಕ್ತಿಗಳ ಬಗ್ಗೆ ಬರೆಯುತ್ತಿದ್ದು, ಈ ಬಗ್ಗೆ ಅಂತಹ ವ್ಯಕ್ತಿಗಳಿಂದ ಬೆದರಿಕೆ ಬಂದಿದೆಯಾ ಎಂದು ಪರಿಶೀಲನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿರೋ ಸುದ್ದಿಗಳ ಪರಿಶೀಲನೆ, ಗೌರಿ ಲಂಕೇಶ್ ಅವರ ಕುಟುಂಬ, ಸ್ನೇಹಿತರು, ಒಡನಾಡಿಗಳ ವಿಚಾರಣೆ. ಗೌರಿ ಲಂಕೇಶ್ ಅವರ ವ್ಯವಹಾರ, ಹಣಕಾಸು ಮತ್ತು ಆಸ್ತಿಯ ಸಂಬಂಧ ಇರೋ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ