ಬಿಜೆಪಿ ರ‍್ಯಾಲಿ: ಉಡುಪಿಯಲ್ಲಿ ಭಾರೀ ಭದ್ರತೆ !

Kannada News

07-09-2017

ಉಡುಪಿ: ಬಿಜೆಪಿಯಿಂದ ಆಯೋಜಿಸಿರುವ ಮಂಗಳೂರು ಚಲೋಗೆ ಇಂದು ಉಡುಪಿಯಿಂದ ಬಿಜೆಪಿ ಕಾರ್ಯಕರ್ತರು ಮಂಗಳೂರಿಗೆ ಹೊರಟಿದ್ದಾರೆ. ಸುಮಾರು 30 ಬಸ್ ಗಳಲ್ಲಿ, ಉಡುಪಿಯಿಂದ 3ಸಾವಿರಕ್ಕೂ ಹೆಚ್ಚು ಮಂದಿ ಮಂಗಳೂರಿಗೆ ಜೈಕಾರ ಕೂಗುತ್ತಾ, ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಧಿಕ್ಕಾರ ಕೂಗುತ್ತಾ ಮಂಗಳೂರಿಗೆ ಹೊರಟಿದ್ದಾರೆ. ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಪಡುಬಿದ್ರೆಯಿಂದ ಪ್ರತ್ಯೇಕ ಬಸ್ ಗಳು ಮಂಗಳೂರಿಗೆ ಹೊರಟಿವೆ. ಬಿಜೆಪಿಯ ಮಂಗಳೂರು ಚಲೋ ಹಿನ್ನೆಲೆ ಉಡುಪಿಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಮುಖ ಜಂಕ್ಷನ್ ಗಳಲ್ಲಿ  ಪೊಲೀಸರನ್ನು ನಿಯೋಜಿಸಲಾಗಿದೆ. ಉಡುಪಿ- ಮಂಗಳೂರು ನಡುವೆ ಒಂದು ಸಾವಿರಕ್ಕಿಂತಲೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಹೆಬ್ರಿ-ಬೈಂದೂರು-ಕುಂದಾಪುರ, ಪಡುಬಿದ್ರೆ ಭಾಗದಲ್ಲಿ ಪೊಲೀಸರ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ