ಮಕ್ಕಳನ್ನು ಕೊಂದು: ತಾಯಿ ಆತ್ಮಹತ್ಯೆ !

Kannada News

07-09-2017

ಬೆಂಗಳೂರು: ಮಕ್ಕಳಿಬ್ಬರನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆಯು, ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮಿ(40) ಆತ್ಮಹತ್ಯೆ ಮಾಡಿಕೊಂಡ ತಾಯಿ. ಮಕ್ಕಳಾದ ಮಮತಾ(10), ದೀಪ್ತಿ (8) ಮಕ್ಕಳನ್ನು ಫ್ಯಾನಿಗೆ ನೇಣು ಬಿಗಿದಿದ್ದಾಳೆ. ಮಕ್ಕಳ ಸಾವಿನ ಬಳಿಕ ತಾನು ಫ್ಯಾನಿಗೆ ನೇಣು ಬಿಗಿದುಕೊಂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಚ್.ಎ.ಎಲ್ ಠಾಣಾ ವ್ಯಾಪ್ತಿಯ ನೆಲ್ಲೂರುಪುರದಲ್ಲಿ ಘಟನೆ ನಡೆದಿದೆ. ಮೃತ ಮಹಾಲಕ್ಷ್ಮಿಯು, ಎನ್.ಎ.ಎಲ್. ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅನಾರೋಗ್ಯ ಸಮಸ್ಯೆ ಹಿನ್ನೆಲೆ ಮಕ್ಕಳನ್ನು, ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್.ಎ.ಎಲ್ ಪೊಲೀಸರು ಸ್ಥಳಕ್ಕೆ ಭೇಟಿ, ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ