ನೈಜೀರಿಯನ್ ಪ್ರಜೆ ಕೊಲೆಯಲ್ಲ: ಅಪಘಾತ !

Kannada News

06-09-2017

ಬೆಂಗಳೂರು: ಸ್ನೇಹಿತರ ಮನೆಯಲ್ಲಿ ಪಾರ್ಟಿ ಮಾಡಿ ಜಗಳ ಮಾಡಿಕೊಂಡು ಮನೆಗೆ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದ ನೈಜೀರಿಯನ್ ಒಬ್ಬ ತಲೆಗೆ ಗಾಯಗೊಂಡು ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಅಪಘಾತದಿಂದ ಎನ್ನುವುದು ಪತ್ತೆಯಾಗಿದೆ. ಗೆದ್ದಲಹಳ್ಳಿ ಹೆಣ್ಣೂರು ರಸ್ತೆಯ ರೈಲ್ವೆ ಸೇತುವೆ ಬಳಿ ಸೋಮವಾರ ನಸುಕಿನಲ್ಲಿ ಬೈಕ್‍ ನಲ್ಲಿ ಹೋಗುತ್ತಿದ್ದ ಮೃತನನ್ನು ನೈಜೀರಿಯಾ ಮೂಲದ  ಶಿಗುಸಿ (33) ಅಪಘಾತದಿಂದ ಮೃತಪಟ್ಟಿರುವುದು ಪೊಲೀಸರ ತನಿಖೆಯಲ್ಲಿ ಕಂಡುಬಂದಿದೆ.

ಶಿಗುಸಿ ತನ್ನ ಸೋದರ ನೈಸ್ಕೋ ಜತೆ ಬೈರತಿಯ ಸ್ನೇಹಿತನ ಮನೆಯಲ್ಲಿ ರಾತ್ರಿ ಪಾರ್ಟಿಗೆ ಹೋಗಿದ್ದು, ಅಲ್ಲಿ ಸ್ನೇಹಿತ ಸೇರಿ ಐದಾರು ಮಂದಿ ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿ ಊಟ ಮಾಡುವ ವೇಳೆ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಮಾರಾಮಾರಿ ನಡೆದಿದೆ.

ಮಾರಾಮಾರಿಯಲ್ಲಿ ನೈಸ್ಕೋ ಮೇಲೆ ಇತರರು ಹಲ್ಲೆ ಮಾಡಿದ್ದಾರೆ. ಗಾಯಗೊಂಡಿದ್ದ ಆತ ತಾನು ಬಂದಿದ್ದ ಕಾರನ್ನು ಚಲಾಯಿಸಿಕೊಂಡು ಪೀಪಲ್ ಟ್ರೀ ಆಸ್ಪತ್ರೆಗೆ ದಾಖಲಾಗಿದ್ದಾನೆ. ನೈಸ್ಕೋ ಹೋದ ನಂತರ ಶಿಗುಸಿ ತಾನು ಬಂದಿದ್ದ ಸುಜುಕಿ ಬೈಕ್ ಅನ್ನು ತೆಗೆದುಕೊಂಡು ಹೆಣ್ಣೂರಿನ ಮನೆಗೆ ಹೊರಟಿದ್ದು, ಮಾರ್ಗಮಧ್ಯೆ ರೈಲ್ವೆ ಸೇತುವೆ ಬಳಿ ತಡೆಗೋಡೆಗೆ ಡಿಕ್ಕಿ ಹೊಡೆದು ತಲೆಗೆ ಗಾಯಗೊಂಡು ಬಿದ್ದು ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಬಾಣಸವಾಡಿ ಸಂಚಾರ ಪೊಲೀಸರು ತಪಾಸಣೆ ನಡೆಸಿದಾಗ ಶಿಗುಸಿ ಅಪಘಾತದಿಂದ ಮೃತಪಟ್ಟಿಲ್ಲ ಎನ್ನುವುದು ಪತ್ತೆಯಾಗಿದೆ. ಕೂಡಲೇ ಹೆಣ್ಣೂರು ಹಾಗೂ ಕೊತ್ತನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೊತ್ತನೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ, ಅಪಘಾತದಿಂದ ಸಾವನ್ನಪ್ಪಿರುವದು ಪತ್ತೆಯಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ