ಬರಹಗಾರರು ಈ ನೆಲದಲ್ಲಿ ಬದುಕಬಾರದೇ..?

Kannada News

06-09-2017

ಧಾರವಾಡ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿವಂಗತ ಡಾ.ಎಂ.ಎಂ ಕಲಬುರ್ಗಿ ಅವರ ಧರ್ಮ ಪತ್ನಿ, ಶ್ರೀಮತಿ ಉಮಾದೇವಿ ಕಲಬುರ್ಗಿ ಪ್ರತಿಕ್ರಿಯೆ ನೀಡಿದ್ದಾರೆ. ಗೌರಿ ಲಂಕೇಶ್ ಅವರ ಹತ್ಯೆಯ ಸುದ್ದಿ ನನಗೆ ಆಘಾತ ತಂದಿದೆ. ಮತ್ತೊಮ್ಮೆ ಈ ನೆಲದಲ್ಲಿ ವೈಚಾರಿಕತೆ ಕೊಲೆ ನಡೆದಿದೆ. ರಾಜ್ಯ ಇನ್ನು ಕಲಬುರ್ಗಿಯವರ ಕೊಲೆಯನ್ನು ಮರೆತಿಲ್ಲಾ, ಕೊಲೆಯ ಆರೋಪಿಗಳು ಸಿಗುವ ಮೊದಲೇ ಮತ್ತೊಂದು ಕೊಲೆ ನಡೆದಿದೆ. ವೈಚಾರಿಕತೆ ಮತ್ತು ಬರವಣಿಗೆ ಮಾಡುವುದೇ ತಪ್ಪಾ, ಸಾಹಿತಿಗಳು ಬರಹಗಾರರು ಈ ನೆಲದಲ್ಲಿ ಬದುಕ ಬಾರದೇ ಎಂದು ಪ್ರಶ್ನಿಸಿದ್ದಾರೆ. ನಮ್ಮ ಯಜಮಾನರ ಹಾಗೇ ಅವರು ಒಬ್ಬ ಬರಹಗಾರ್ತಿ. ಕೊಲೆಗೈದ  ಹಂತಕರನ್ನು ಕೂಡಲೆ ಬಂಧಿಸುವಂತೆ ಆಗ್ರಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ