ಗೌರಿ ಬಗ್ಗೆ ಇದೆಂಥಾ ಭಯ…?

Kannada News

06-09-2017

ನಿರ್ಭೀತ ಪತ್ರಕರ್ತೆ, ಪ್ರಗತಿಪರ ಚಿಂತಕಿ, ಹೋರಾಟಗಾರ್ತಿ ಗೌರಿ ಲಂಕೇಶ್ ಆಗುಂತಕ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿ ನಮ್ಮಿಂದ ಮರೆಯಾಗಿದ್ದಾರೆ. ಇದೀಗ ಬೆಂಗಳೂರಿನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಗೌರಿ ಅವರ ಅಂತ್ಯ ಸಂಸ್ಕಾರವನ್ನು, ನೆಲಮಂಗಲ ಬಳಿಯ ಅವರ ಫಾರಂ ಹೌಸ್‌ ನಲ್ಲಿ ನಡೆಸಲು ಅವರ ಕುಟುಂಬ ಬಯಸಿತ್ತು, ಆದರೆ ಕೊಲೆಗೀಡಾಗಿರುವ ಗೌರಿ ಅವರು ಪ್ರೇತವಾಗಿಬಿಡುತ್ತಾರೆ, ಅದರಿಂದ ನಮಗೆ ಮತ್ತು ಊರಿಗೆ ತೊಂದರೆಯಾಗಿಬಿಡುತ್ತದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ಚಾಮರಾಜಪೇಟೆಯ ರುದ್ರಭೂಮಿಯಲ್ಲೇ ಅಂತಿಮ ಸಂಸ್ಕಾರ ನಡೆಸಲು ಉದ್ದೇಶಿಸಲಾಗಿದೆಯೆಂದು ಸೂಪರ್ ಸುದ್ದಿಗೆ ತಿಳಿದು ಬಂದಿದೆ.

ಇದೇ ವೇಳೆ ಗೌರಿ ಅವರ ಹತ್ಯೆ ಹಿಂದೆ, ಮಹಾರಾಷ್ಟ್ರದ ಒಂದು ಮೂಲಭೂತವಾದಿ ಸಂಘಟನೆಯ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಇದು ಆರೆಸ್ಸೆಸ್‌ನಿಂದ ಸಿಡಿದುಹೋದ ಬಣದವರು ಕಟ್ಟಿಕೊಂಡಿರುವ ಸಂಘಟನೆಯೆಂದೂ ಕೂಡ ಹೇಳಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ