ಪೊಲೀಸ್ ಠಾಣೆಗೆ ಬಡಿದ ಸಿಡಿಲು !

Kannada News

06-09-2017

ಮೈಸೂರು: ಮೈಸೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಗುಡುಗು ಸಹಿತ ಮಳೆ ಅವಾಂತರಗಳನ್ನು ಸೃಷ್ಟಿಸಿದ್ದಲ್ಲದೇ, ಅಪಾರ ಹಾನಿ ಉಂಟು ಮಾಡಿದೆ. ಮೈಸೂರು ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಸಿಡಿಲು ಬಡಿದಿರುವ ಪರಿಣಾಮ, ಬೆಲೆಬಾಳುವ ವಯರ್ ಲೆಸ್ ಉಪಕರಣಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಠಾಣೆಯ ಗೋಡೆಗೆ ಸಿಡಿಲು ಬಡಿದಿದ್ದು, ಸಂಪೂರ್ಣ ಕರಕಲಾಗಿದೆ. ಠಾಣೆಯಲ್ಲಿ ಅಳವಡಿಸಿರುವ ಫ್ಯಾನ್ ಗಳು ಸುಟ್ಟು ಹೋಗಿವೆ. ಅಲ್ಲದೇ ಠಾಣೆಯ ಎದುರು ಇರುವ ಆಂಧ್ರ ಬ್ಯಾಂಕ್ ಗೂ ಸಿಡಿಲು ಬಡಿದಿದ್ದು ಹಾನಿಯಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ