ಇಬ್ಬರು ಗಾಂಜಾ ಆರೋಪಿಗಳ ಬಂಧನ

Kannada News

05-09-2017

ಬೆಂಗಳೂರು - ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಶ್ರೀರಾಮಪುರದ ಪೊಲೀಸರು, 15 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಪಿ ಅಗ್ರಹಾರದ ನಾರಾಯಣ (34) ಮತ್ತು ತಮಿಳುನಾಡಿನ ಡೆಂಕಣಿಕೋಟೆಯ ಆನಂದ್ (44) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 4.5 ಲಕ್ಷ ರೂ. ಮೌಲ್ಯದ 15 ಕೆಜಿ ಗಾಂಜಾ, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಪಿಎಫ್ ರಸ್ತೆಯ ಅಮ್ಮಾ ನಾಗಮ್ಮ ದೇವಸ್ಥಾನದ ಬಳಿ ಗಾಂಜಾ ಪ್ಯಾಕೆಟ್‍ಗಳನ್ನು ಹಿಡಿದುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.
 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ