ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2017

Kannada News

05-09-2017

ಮೈಸೂರು: ದಸರಾ ಗಜಪಡೆಯ ಮಾವುತ ಹಾಗೂ ಕಾವಡಿಗರ ಕುಟುಂಬಕ್ಕೆ  ಮೈಸೂರು ಜಿಲ್ಲಾಡಳಿತದಿಂದ ಉಪಹಾರ ಕೂಟ ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಮಾವುತ, ಕಾವಾಡಿಗಳ ಕುಟುಂಬ ಸದಸ್ಯರಿಗೆ  ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಹೋಳಿಗೆ ಉಪಹಾರ ಬಡಿಸಿದರು.

ಉಪಹಾರ ಬಡಿಸಿದ ನಂತರ ತಾವು ಸಹ ಮಾವುತರ ಜೊತೆಯಲ್ಲೆ ಕುಳಿತು ಉಪಹಾರ ಸೇವಿಸಿದರು. ಶಾಸಕ ಸೋಮಶೇಖರ್, ಜಿಲ್ಲಾಧಿಕಾರಿ ಡಿ. ರಂದೀಪ್, ಅರಣ್ಯಾಧಿಕಾರಿ ಏಡುಕುಂಡಲ ಸಹ ಸಾಥ್ ನೀಡಿದರು. ಎಲ್ಲ ಮಾವುತರು, ಕಾವಾಡಿಗಳ ಕುಟುಂಬಗಳು ಸಚಿವರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಉಪಹಾರ ಸೇವಿಸಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ