ಕಳ್ಳಿಯರಿಗೆ ಬಿತ್ತು ಸಖತ್ ಗೂಸಾ !

Kannada News

04-09-2017

ಮೈಸೂರು: ಮೈಸೂರು ತಾಲೂಕಿನ ಬನ್ನೂರು ರಸ್ತೆಯಲ್ಲಿರುವ ಮೆಲ್ಲಹಳ್ಳಿ ಗ್ರಾಮಸ್ಥರಿಂದ ಕಳ್ಳಿಯರಿಗೆ ಸಖತ್ ಗೂಸ ನೀಡಿದ್ದಾರೆ. ಆಂಧ್ರ ಮೂಲದ ಇಬ್ಬರು ಕಳ್ಳಿಯರ ಕೈಗೆ ಹಗ್ಗಕಟ್ಟಿದ ಗ್ರಾಮಸ್ಥರು ಧರ್ಮದೇಟು ನೀಡಿದರು. ಹಳ್ಳಿಕೇರಿ ಹುಂಡಿಯ ಧರ್ಮಸ್ಥಳ ಮಂಜುನಾಥ ಸ್ವಸಹಾಯ ಸಂಘದ ಸದಸ್ಯೆ ಮೈಸೂರಿನಲ್ಲಿನ ಬ್ಯಾಂಕಿನಿಂದ ಎರಡು ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಬಸ್ ನಲ್ಲಿ ತೆರಳುತ್ತಿದ್ದರು. ಈ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ಆಂಧ್ರ ಮೂಲದ ಮಹಿಳೆಯರು ಬ್ಯಾಗ್ ನಿಂದ ಒಂದು ಲಕ್ಷ ರೂಪಾಯಿ ಕದ್ದು, ಉಳಿದ ಹಣ ಕದಿಯಲೆಂದು ಬಸ್ ನಲ್ಲಿ ಕೂತಿದ್ದರು. ಮಹಿಳೆಯರ ವರ್ತನೆಯಿಂದ ಅನುಮಾನಗೊಂಡ ಬಸ್ ಕಂಡಕ್ಟರ್ ಮೆಲ್ಲಹಳ್ಳಿಯಲ್ಲಿ ಬಸ್ ನಿಲ್ಲಿಸಿ ಮಹಿಳೆಯರ ವಿಚಾರಣೆ ನಡೆಸಿದ್ದಾರೆ, ಈ ವೇಳೆ ಸತ್ಯ ಒಪ್ಪಿಕೊಂಡ ಮಹಿಳೆಯರನ್ನು ಗ್ರಾಮಸ್ಥರು, ಇಬ್ಬರು ಕಳ್ಳಿಯರಿಗೆ ಮನಬಂದಂತೆ ಥಳಿಸಿದ್ದಾರೆ. ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಕಳ್ಳಿಯರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ