ಸಾಮರಸ್ಯ ಹಾಳು ಮಾಡಲು ಬೈಕ್ ರ‍್ಯಾಲಿ..?

Kannada News

04-09-2017 220

ಬೆಂಗಳೂರು: ಬಿಜೆಪಿ ಬೈಕ್  ರ‍್ಯಾಲಿ ವಿಚಾರಕ್ಕೆ ಸಂಬಂಧಿಸಿದಂತೆ, ವಿಧಾನಸೌಧದಲ್ಲಿ ಅರಣ್ಯ ಸಚಿವ ರಮಾನಾಥ್ ರೈ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಸುಶಿಕ್ಷಿತರು, ಕೆಲವು ಮತೀಯವಾದಿ ಶಕ್ತಿಗಳು ಸಾಮರಸ್ಯಕ್ಕೆ ಧಕ್ಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇತ್ತೀಚೆಗೆ ಮೂರು ಕೊಲೆಗಳು ನಡೆದಿವೆ, ಇದೆಲ್ಲವೂ ನಿಯೋಜಿತ ಹತ್ಯೆಯಾಗಿದೆ, ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಸೂಕ್ತ ಕ್ರಮ ತೆಗದುಕೊಂಡಿದ್ದಾರೆ, ಸರ್ಕಾರ ಕೂಡ ಕ್ರಮ ತೆಗದುಕೊಂಡಿದೆ ಎಂದರು. ಈಗ ನಮ್ಮ ಜಿಲ್ಲೆ ಶಾಂತಿಯುತವಾಗಿದೆ, ಸಾಮರಸ್ಯ ಹಾಳು ಮಾಡಲು ಈಗ ಬೈಕ್  ರ‍್ಯಾಲಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ಕಾನೂನು ಸುವ್ಯವಸ್ಥೆಗೆ ಭಂಗ ತರಲು ಬೈಕ್ ರ‍್ಯಾಲಿ ಮಾಡುತ್ತಿದ್ದಾರೆ. ಆದರೆ ಇದೇ ತಿಂಗಳು 12 ರಂದು, ಫರಂಗಿಪೇಟೆಯಿಂದ ಮಾಣಿ ವರೆಗೂ ಸಾಮರಸ್ಯ ನಡಿಗೆ ಹಮ್ಮಿಕೊಳ್ಳಾಗಿದೆ, ಎಲ್ಲ ಸಂಘ ಸಂಸ್ಥೆಗಳು ಸಾಮರಸ್ಯ ನಡಿಗೆಯಲ್ಲಿ ಭಾಗಬಹಿಸಬಹದು ಎಂದು ತಿಳಿಸಿದರು.

ಬಿಜೆಪಿ ಬೈಕ್ ರ‍್ಯಾಲಿ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ, ಆದ್ರೆ ಕಾನೂನು ಕ್ರಮ ಕೈಗೆತ್ತಿಕೊಂಡ್ರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಕಾನೂನು ಚೌಕಟ್ಟಿನಲ್ಲಿ ಬಿಜೆಪಿ ಅವರು ಕಾರ್ಯಕ್ರಮ ಮಾಡಲಿ. ಮಂಗಳೂರು ಬಿಜೆಪಿಯವರ ನಾಗಪುರ ವಿದ್ದಂತೆ. ಹೀಗಾಗಿ ಅಲ್ಲಿ ಮತೀಯ ಕ್ಷೇತ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ, ಆದರೆ ಅವರ ಉದ್ದೇಶಗಳು ಈಡೇರುವುದಿಲ್ಲ, ಇವರ ಯಾವುದೇ ನಾಟಕ ನಡೆಯುವುದಿಲ್ಲ ಎಂದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ