ಮಾತೆ ಮಹಾದೇವಿ ಗುರುದ್ರೋಹಿ..?

Kannada News

04-09-2017

ಬಾಗಲಕೋಟೆ: ಕೊಳದಮಠ ಶಾಂತವೀರ ಸ್ವಾಮೀಜಿ, ಮಾತೆ ಮಹಾದೇವಿ ವಿರುದ್ಧ ಗರಂ ಆಗಿದ್ದಾರೆ. ಬಾಗಲಕೋಟೆಯ ಬಾದಾಮಿ ತಾಲ್ಲೂಕಿನ, ಶಿವಯೋಗಮಂದಿರ ಮಾತನಾಡಿಸದ ಅವರು, ಮಾತೆ ಮಹಾದೇವಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಮಾತೆ ಮಹಾದೇವಿ ಗುರುದ್ರೋಹಿ, ನಾಲಾಯಕ್, ಬಸವಣ್ಣನವರ ಅಂಕಿತನಾಮ ತೆಗೆದು ಲಿಂಗದೇವ ಅಂತ ತಿರುಚಿದ್ದಳು ಎಂದು ವಾಗ್ದಾಳಿ ನಡೆಸಿದರು. ಗುರುಲಿಂಗದೇವ ಇದ್ದಾನೋ? ಸತ್ತಿದ್ದಾನೋ? ಲಿಂಗದೇವ ಯಾರು? ಇವಳಿಗೂ ಅವನಿಗೂ ಏನು ಸಂಬಂಧ? ಸ್ಪಷ್ಟಪಡಿಸಲಿ ಎಂದಿದ್ದಾರೆ. ಮಾತೆಮಹಾದೇವಿ ಮತ್ತು  ಗುರುಲಿಂಗದೇವನದ್ದು ಪುತ್ರವಾತ್ಸಲ್ಯ ಸಂಬಂಧವೋ? ಗುರು ಶಿಷ್ಯರ ಸಂಭಂಧವೋ ಹೇಳಲಿ, ಈ ಬಗ್ಗೆ ಮಾತೆ ಮಹಾದೇವಿ ಸ್ಪಷ್ಟಪಡಿಸಲಿ  ಎಂದು ಆಗ್ರಹಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ