ಮಂಚಕ್ಕೆ ಕರೆದು: ವಂಚಿಸುತ್ತಿದ್ದ ಗ್ಯಾಂಗ್ ಬಂಧನ !

Kannada News

04-09-2017 500

ಬೆಂಗಳೂರು:  ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡುವ ಯುವಕರನ್ನು ಗುರಿಯಾಗಿಸಿ ಅವರನ್ನು ಪರಿಚಯ ಮಾಡಿಕೊಂಡು ಮನೆಗೆ ಕರೆಸಿಕೊಂಡು, ಯುವತಿಯೊಬ್ಬರ ಜೊತೆ ಲೈಂಗಿಕ ಕ್ರಿಯೆ ನಡೆಸಲು ಬಿಟ್ಟು ವಿಡಿಯೋ ಮಾಡಿ ಬೆದರಿಸಿ ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದ ಮಹಿಳೆಯೊಬ್ಬಳಿದ್ದ ಗ್ಯಾಂಗ್‍ ಅನ್ನು  ನಗರ ಪೊಲೀಸರು ಪತ್ತೆಹಚ್ಚಿದ್ದಾರೆ.

ಗ್ಯಾಂಗ್‍ ನಲ್ಲಿ ಚಿಕ್ಕಬೇಗೂರಿನ ಲತಾ (25)ಪವನ್ (24)ರೂಪೇನ ಅಗ್ರಹಾರದ ರಾಘವೇಂದ್ರ (20)ವಿರಾಟ್‍ನಗರದ ಕಿರಣ್ (19)ನನ್ನು ಜಂಟಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಹಾಗೂ ಬೇಗೂರು ಪೊಲೀಸರು ಬಂಧಿಸಿ ಗ್ಯಾಂಗ್‍ ನಲ್ಲಿದ್ದು ತಲೆ ಮರೆಸಿಕೊಂಡಿರುವ ಶಾಂತನಿಗಾಗಿ ಶೋಧ ನಡೆಸಿದ್ದಾರೆ. ವಿವಾಹವಾಗಿ ಪತಿಯಿಂದ ದೂರವಾಗಿದ್ದ ಆರೋಪಿ ಲತಾ, ತನ್ನ ಪ್ರೀಯಕರ ಕಿರಣ್ ಹಾಗೂ ಇತರ ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ದಂಧೆ ನಡೆಸುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ. ಮೊದಲಿಗೆ ರಸ್ತೆ ಬದಿ ನಿಂತು ಡ್ರಾಪ್ ಕೇಳುವ ನೆಪದಲ್ಲಿ ಲತಾ ಸಾಫ್ಟ್‍ ವೇರ್ ಉದ್ಯೋಗಿಗಳನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡು ಸ್ನೇಹಿತೆಯ ರೂಪದಲ್ಲಿ ಸಲುಗೆಯಿಂದ ಮಾತನಾಡಿ ಎಕಾಂತಕ್ಕೆ ಅಹ್ವಾನಿಸಿ ತನ್ನ ರೂಮಿಗೆ ಕರೆದು ಅಲ್ಲಿ ಬೇರೊಬ್ಬ ಹುಡುಗಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಬಿಡುತ್ತಿದ್ದಳು 

ಅಲ್ಲಿಂದ ಲತಾ ಪರಾರಿಯಾಗಿ 10 ನಿಮಿಷದ ಬಳಿಕ ಲತಾ, ಕಿರಣ್ ಗ್ಯಾಂಗ್‍ ನ ಇತರರು ಇಬ್ಬರು ಇರುವ ಸ್ಥಳಕ್ಕೆ ಬಂದು ಸಾಫ್ಟ್‍ ವೇರ್ ಉದ್ಯೋಗಿಯ ಬೆತ್ತಲೆ ಚಿತ್ರಣ ಹಾಗೂ ಹುಡುಗಿಯೊಂದಿಗೆ ಇರುವ ವಿಡಿಯೋ ಮಾಡಿ ಮೊಬೈಲ್ ನಗದು ಚಿನ್ನ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದರು.

ಅದೇ ರೀತಿ ಪರಿಚಯವಾಗಿದ್ದ ಸಾಫ್ಟ್‍ ವೇರ್ ಉದ್ಯೋಗಿ ರಾಘವೇಂದ್ರ ಎಂಬುವರನ್ನು ಕರೆಸಿಕೊಂಡು ತನ್ನ ಸ್ನೇಹಿತೆಯೊಂದಿಗೆ ಇರುವ ವಿಡಿಯೋ ಮಾಡಿ ಆತನ ಬೆತ್ತಲೆ ಪೋಟೋಗಳನ್ನು ತೆಗೆದು 2 ಸಾವಿರ ನಗದು 2 ಮೊಬೈಲ್‍ಗಳನ್ನು ದೋಚಿದ್ದರು. ಎರಡು ದಿನಗಳ ಹಿಂದೆ ಹೊಂಗಸಂದ್ರ ರಸ್ತೆಯಲ್ಲಿರುವ ಮನೆಗೆ ಖಾಸಗಿ ಉದ್ಯೋಗಿಯೊಬ್ಬರು ಕಾರಿನಲ್ಲಿ ಬರುವಾಗ ಲತಾ ಹಾಗೂ ಆತನ ಹುಡುಗರು ಉದ್ಯೋಗಿಯನ್ನು ತಡೆದು ಹೊಂಗಸಂದ್ರ ಮುಖ್ಯರಸ್ತೆ ಯಲ್ಲಿರುವ 3ನೇ ಅಡ್ಡರಸ್ತೆಗೆ ಕರೆದೊಯ್ದು ಲತಾಳ ಮನೆಯಲ್ಲಿ ಇರಿಸಿದ್ದರು. ಬಳಿಕ ಲತಾ ಹುಡುಗಿಯನ್ನು ಕರೆಸಿ ಬೆತ್ತಲೆ ಮಾಡಿ ಉದ್ಯೋಗಿ ಶಿವಕುಮಾರ್ ನೊಂದಿಗೆ  ಫೋಟೋವನ್ನೂ ಸಹ ತೆಗೆಸಿದ್ದಳು. ಲತಾಳ ಹುಡುಗರಾದ ಕಿರಣ್ ಹಾಗೂ ಸಂಗಡಿಗರು ಉದ್ಯೋಗಿಯ ಮೊಬೈಲ್ ಕಸಿದು ಬೇರೆ ಮೊಬೈಲ್ ನೀಡಿ 50 ಸಾವಿರ ಹಣವನ್ನು ತರಲು ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ದೂರು ಸ್ವೀಕರಿಸಿದ ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಂಡವನ್ನು ರಚನೆ ಮಾಡಿ ಇನ್ಸ್ ಪೆಕ್ಟರ್ ಕುಲಕರ್ಣಿ ನೇತೃತ್ವದಲ್ಲಿ ಮಫ್ತಿಯಲ್ಲಿ ಬೇಗೂರು ಪೊಲೀಸರ ಜೊತೆಯಾಗಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಸಾಫ್ಟ್‍ ವೇರ್ ಉದ್ಯೋಗಿಗೆ ಬೆಳಗ್ಗಿನಿಂದ ಕರೆ ಮಾಡಿ 50 ಸಾವಿರ ಬೇಡಿಕೆ ಇಟ್ಟಿದ್ದ, ಕಿರಣ್ ಹಾಗೂ ಆತನ ಸ್ನೇಹಿತರು ಉದ್ಯೋಗಿ ಶಿವಕುಮಾರ್‍ ನನ್ನು ಸಿಲ್ಕ್‍ ಬೋರ್ಡ್ ಬಳಿ ಇರುವ ಖಾಸಗಿ ಶೋರೋ ಬಳಿ ಬರಲು ಹೇಳಿದ್ದಾರೆ. ಇನ್ನು ಸಿಸಿಬಿ ತಂಡ ಎಚ್ಚರ ವಹಿಸಿ ನಿಗಾ ಇಟ್ಟು ಅಲ್ಲೇ ಬೀಡು ಬಿಟ್ಟಿದ್ದರು. ರಾಘವೇಂದ್ರನೊಂದಿಗೆ ಮಾತನಾಡುತ್ತಿದ್ದ ಕಿರಣ್‍ ನನ್ನು ವಶಕ್ಕೆ ಪಡೆದಾಗ ಉಳಿದ ಆರೋಪಿಗಳು ಓಡಲು ಪ್ರಾರಂಭಿಸಿದರು. ಇವರನ್ನು ಹಿಂಬಾಲಿಸಿ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ