ನೂತನ ಸಾರಿಗೆ ಸಚಿವರ ಬಸ್ ಪ್ರಯಾಣ !

Kannada News

04-09-2017

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಬಸ್ ಪ್ರಯಾಣ ಜನಪ್ರಿಯಗೊಳಿಸುವ ಉದ್ದೇಶದಿಂದ ನಡೆಸುವ ಬಸ್ ದಿನಾಚರಣೆ ಅಂಗವಾಗಿ, ನೂತನ ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಎಚ್.ಎಂ.ರೇವಣ್ಣ ಅವರು ಬಸ್ನಲ್ಲಿ ಪ್ರಯಾಣಿಸಿ ಜಾಗೃತಿ ಮೂಡಿಸಿದರು. ಮಹಾಲಕ್ಷ್ಮೀ ಪುರಂ ನ ಮನೆಯಿಂದ ಲಾಲ್ ಬಾಗ್ ತನಕ ಬಿಎಂಟಿಸಿ ಬಸ್ ನಲ್ಲಿ ಆಗಮಿಸಿದ ಸಚಿವ ಎಚ್.ಎಂ.ರೇವಣ್ಣ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವವರಿಗೆ ಬೆಂಗಳೂರು ನಗರ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವಂತೆ ಮನವಿ ಮಾಡಿದರು. ನಂತರ ಸಚಿವ ರೇವಣ್ಣ ಅವರು ಲಾಲ್ ಬಾಗ್ ನಿಂದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ವಿಧಾನಸೌಧಕ್ಕೆ ಬಸ್ ನಲ್ಲಿ ಆಗಮಿಸಿದರು.                       

ಈ ವೇಳೆ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಮಾಡಲು‌ ಹಾಗೂ ವಾಯು ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ಸಾರಿಗೆ ಬಳಸುವಂತೆ ಜಾಗೃತಿ ಮೂಡಿಸಲು ಬಸ್ ದಿನಾಚರಣೆ ನಡೆಸಲಾಗುತ್ತದೆ. ಬಿಎಂಟಿಸಿ ಸೇವೆಯನ್ನು ಸುಧಾರಿಸಿ ಪ್ರಯಾಣಿಕ ಸ್ನೇಹಿಯಾಗಿ ಮಾಡಲು ವಿಶೇಷ ಯೋಜನೆ ರೂಪಿಸಲಾಗುವುದು. ಮೆಟ್ರೋ ರೈಲಿಗೆ ಸಂಪರ್ಕ ಕಲ್ಪಿಸುವ ಫೀಡರ್ ಬಸ್ ಸೇವೆಯನ್ನು ಹೆಚ್ಚಿಸಲಾಗುವುದು ಎಂದರು. ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ ಸಹಿತ ಹಿರಿಯ ಅಧಿಕಾರಿಗಳು ಸಚಿವ ಎಚ್.ಎಂ.ರೇವಣ್ಣ ಅವರೊಂದಿಗೆ ಬಸ್ ನಲ್ಲಿ ಪ್ರಯಾಣ ಮಾಡಿದರು.             ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ