ಅಂಗವಿಕಲರ ಪ್ರತಿಭಟನೆ !

Kannada News

04-09-2017

ವಿಜಯಪುರ: ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಅಂಗವಿಕಲರು ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅಂಗವಿಕಲರಿಗೆ ನೀಡುತ್ತಿದ್ದ, ಗೌರವ ಧನವನ್ನು ಹೆಚ್ಚಿಸಬೇಕು, ಪುನರ್ವಸತಿ  ಯೋಜನೆಯನ್ನು ಬಲವರ್ಧನೆಗೊಳಿಸಿ ಅಧಿನಿಯಮ ಸ್ಥಾಪಿಸಬೇಕು. ಎಂ.ಆರ್.ಡಬ್ಲೂ. ವ್ಹಿ.ಆರ್.ಡಬ್ಲೂ. ಕಾರ್ಯಕರ್ತರಿಗೆ ಹೆರಿಗೆ ಮತ್ತು ಬಾಣಂತಿ ಸಮಯದಲ್ಲಿ ಕನಿಷ್ಟ 6 ತಿಂಗಳ ವೇತನ ಸಹಿತ ರಜಾ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪರಶುರಾಮ ಗುನ್ನಾಪೂರˌ ಮುತ್ತುರಾಜ ಸಾತಿಹಾಳˌ ರವಿ ರಾಠೋಡ ಹಾಗೂ ಇನ್ನಿತರರು ಭಾಗವಹಿಸಿದ್ದರು.          

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ