ನನ್ನ ಅಕೌಂಟ್ ಗಳು ಫೇಕ್ ಆಗಿವೆ ..?

Kannada News

04-09-2017

ಮೈಸೂರು: ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್, ಟ್ವಿಟರ್ ಖಾತೆಗಳನ್ನು ತೆರೆಯುತ್ತಿದ್ದ ಫಟಿಂಗರು, ಇದೀಗ ಪೊಲೀಸ್ ಅಧಿಕಾರಿಯ ಸೋಷಿಯಲ್ ಅಕೌಂಟ್ ಗಳನ್ನು ನಕಲಿ ಮಾಡಲಾರಂಭಿಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ ದಕ್ಷ ಪೊಲೀಸ್ ಅಧಿಕಾರಿಯೋರ್ವರ ಸೋಷಿಯಲ್ ಅಕೌಂಟ್ ಗಳನ್ನು ನಕಲಿ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ರವಿ ಡಿ. ಚೆನ್ನಣ್ಣನವರ್ ಅವರ ಹೆಸರಿನಲ್ಲಿ ಕೆಲವರು ನಕಲಿ ಫೇಸ್ ಬುಕ್, ಟ್ವಿಟರ್, ಇನ್ ಸ್ಟ್ರಾಗ್ರಾಂ ಅಕೌಂಟ್ ಗಳನ್ನು ತೆರೆದಿದ್ದಾರೆ. ಈ ಬಗ್ಗೆ ಸ್ವತಃ ರವಿ ಡಿ.ಚೆನ್ನಣ್ಣವರ್ ಅವರೇ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದುಕೊಂಡಿದ್ದು, ನನ್ನ ಅಕೌಂಟ್ ಗಳು ಫೇಕ್ ಆಗಿವೆ. ಇದು ಕ್ರಿಮಿನಲ್ ಅಪರಾಧ. ಈ ಕೃತ್ಯ ಎಸಗಿದವರನ್ನು ಹಿಡಿದು ಶಿಕ್ಷಿಸುತ್ತೇವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅಲ್ಲದೇ ನಾನೊಬ್ಬ ಸಾಮಾನ್ಯ ವ್ಯಕ್ತಿ, ಉತ್ತಮ ಕೆಲಸಕ್ಕಾಗಿ ನಿಮ್ಮ ಸಲಹೆಗಳನ್ನು ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ ಪೊಲೀಸರಿಗೆ ಇಂತಹವರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲವೇ? ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಮೂಡಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ